ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ನಿಂದ, ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರ ನೇತೃತ್ವದಲ್ಲಿ 563ನೇ ಸೇವಾ ಯೋಜನೆ ಅಂಗವಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೀರಚಿಲುಮೆ ಸಿದ್ದವನ ಉಜಿರೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಾವರ ಪಿಲ್ಯ ಶಾಲೆಗೆ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಹೊಸಪಟ್ಟ ಬಜಿರೆ ವೇಣೂರು ಶಾಲೆಯಲ್ಲಿ ಬ್ಯಾಗ್ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಪುಸ್ತಕ ವಿತರಣೆ ಮಾಡಿ ಮಾತನಾಡಿ ಸರಕಾರಿ ಶಾಲೆಯಲ್ಲಿ ಕಲಿತಂತಹ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಸಮಾಜದಲ್ಲಿ ಬೆರೆಯುತ್ತ ಹೋಗುತ್ತಾರೆ. ನಾವು ಮೊದಲು ನಮ್ಮ ಪರಿಸರದ ಸರಕಾರಿ ಶಾಲೆಯನ್ನು ಪ್ರೀತಿಸೋಣ ಎಂದು ರಾಜ ಕೇಸರಿ ಸಂಘಟನೆಯು ಕಳೆದ 13 ವರ್ಷಗಳಿಂದ ತನ್ನ ಕೈಲಾದ ಸೇವೆ ಮೂಲಕ ಇಡೀ ರಾಜ್ಯಮಟ್ಟದಲ್ಲೇ ಅತ್ಯುತ್ತಮ ಕಾರ್ಯಕ್ರಮಗಳನ್ನು ನಿರ್ವಹಿಸಿ ಕೂಡ ಬಂದಿದೆ. ಕೋರೋನ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಗಳನ್ನ ಅಂತ್ಯ ಸಂಸ್ಕಾರ ನೆರವೇರಿಸುವಲ್ಲಿ ಇವರ ಸಾಧನೆಯನ್ನು ಮೆಚ್ಚುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿ. ಸರಕಾರಿ ಶಾಲೆ ಉಳಿಯುವುದಕ್ಕೋಸ್ಕರ ಶ್ರಮಪಟ್ಟು ನಿಸ್ವಾರ್ಥ ಸೇವೆಯಲ್ಲಿ ನಿರತರಾಗಿರುವ ರಾಜ ಕೇಸರಿ ಸಂಘಟನೆ ಸರಕಾರಿ ಶಾಲೆಗಳಿಗೆ ದಾನಿಗಳ ಮುಖಾಂತರ ತಮ್ಮ ಕೈಲಾದೇಯ ಸೇವೆ ಮೂಲಕ ಪುಸ್ತಕ ಬ್ಯಾಗ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸಪಟ್ಟ ಬಜಿರೆ ವೇಣೂರಿನ ಎಸ್.ಡಿ.ಎಮ್.ಸಿ ಅಧ್ಯಕ್ಷ ದಯಾನಂದ ಪೂಜಾರಿ, ಬಜಿರೆ ವೇಣೂರು ಗ್ರಾಮ ಪಂಚಾಯತ್ ಸದಸ್ಯರಾದ ಸುನಿಲ್, ಪ್ರವೀಣ್ ಪೂಜಾರಿ ಜಾರಿಗೆದಡಿ, ತಾಯಂದಿರ ಸಮಿತಿಯ ಅಧ್ಯಕ್ಷೆ ಸುಮಿತ್ರ, ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ, ಅಧ್ಯಕ್ಷ ಸತೀಶ್ ಕಂಗಿತ್ತಿಲ್, ಸಂಚಾಲಕ ಜಗದೀಶ್ ಲಾಯಿಲ, ಸಹಸಂಚಾಲಕ ಶರತ್ ಕರಾಯ, ಸಂಘಟನಾ ಕಾರ್ಯದರ್ಶಿ ವಿನೋದ್ ಲಾಯಿಲ, ಸಾಂಸ್ಕೃತಿಕ ಕಾರ್ಯದರ್ಶಿ ದೇವರಾಜ್, ವಿದ್ಯಾರ್ಥಿ ಪ್ರಮುಖ ಸಂದೇಶ್ ಉಪಸ್ಥತರಿದ್ದರು. ಹೊಸಪಟ್ಣ ಅಂಗನವಾಡಿಗೆ ಭೇಟಿ ನೀಡಿದರು. ಮುಖ್ಯ ಶಿಕ್ಷಕಿ ವಿದ್ಯಾ ಕೆ. ಸ್ವಾಗತಿಸಿದರು. ಸಹ ಶಿಕ್ಷಕಿ ಭವ್ಯ ಕಾರ್ಯಕ್ರಮದ ನಿರೂಪಣೆಯನ್ನು ನೀಡಿದರು.