ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025- 26ನೇ ಸಾಲಿನ ಶೈಕ್ಷಣಿಕ ವರ್ಷದ ಹೆತ್ತವರ ಸಭೆಯನ್ನು ಆಯೋಜಿಸಲಾಯಿತು. ಶಾಲಾ ಸಂಚಾಲಕ ಫಾ. ಎಲಿಯಾಸ್ ಡಿಸೋಜಾ ಅವರು ಹಾಗು ವೇದಿಕೆಯಲ್ಲಿ ಇದ್ದ ಅತಿಥಿ ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿರುವ ಹೋಲಿ ಕ್ರಾಸ್ ಚರ್ಚ್ ಮಂಜೊಟ್ಟಿನ ಧರ್ಮ ಗುರು ಪೌಲ್ ಸೆಬಾಸ್ಟಿಯನ್ ಡಿಸೋಜ ಅವರು ಪೋಷಕರನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಹೆತ್ತವರೆ ಆರಾಧ್ಯ ದೈವವಾಗಬೇಕು ಎಂದು ತಿಳಿಸಿದರು. ಹಾಗೂ ಕ್ಯಾಥಲಿಕ್ ಬೋರ್ಡಿನಲ್ಲಿ ಐಟಿ ಅಡ್ಮಿನ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಶಿಧರ್ ಆಚಾರ್ಯ ಅವರು ಪೋಷಕರಿಗೆ ಪೇರೆಂಟಲ್ ಆಪ್ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಿಕ್ಷಕರ ರಕ್ಷಕ ಸಂಘದ ಉಪಾಧ್ಯಕ್ಷ ಶ್ಯಾಮ್ ಸುಂದರ್ ಭಟ್ ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲಿಯೋ ಪಿರೇರಾ ಹಾಗೂ ಶಿಕ್ಷಕ ರಕ್ಷಕ ಸಭೆಯ ಕಾರ್ಯದರ್ಶಿ ಸಹಶಿಕ್ಷಕಿ ರಾಜೇಶ್ವರಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮೋನಿಕಾ ಡಿಸೋಜಾ ಶಾಲಾ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಿದರು. ನಂತರ ನೂತನ ಶಿಕ್ಷಕ ರಕ್ಷಕ ಸಂಘದ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಶಿಕ್ಷಕರ ರಕ್ಷಕ ಸಂಘದ ನೂತನ ಉಪಾಧ್ಯಕ್ಷರಾಗಿ ಸ್ಟೀವನ್ ಪಾಯ್ಸ್, ನೂತನ ಕಾರ್ಯದರ್ಶಿಯಾಗಿ ಶೇರಿನ್ ಗಾನ್ಸಾಲ್ವಿಸ್ ಆಯ್ಕೆಯಾದರು. ಸಭೆಯು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು. ಸಹಶಿಕ್ಷಕಿಯರಾದ ಸುಜಾತ ಸ್ವಾಗತಿಸಿ, ವೀಣಾ ಕಾರ್ಯಕ್ರಮವನ್ನು ನಿರೂಪಿಸಿದರು. ನಿರ್ಮಲ ಧನ್ಯವಾದವಿತ್ತರು.