Site icon Suddi Belthangady

ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು-ನಾವೂರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 26ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ

ಇಂದಬೆಟ್ಟು: ಜೂ.29ರಂದು ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆವರಣದಲ್ಲಿ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯ ಪೂರ್ವಭಾವಿ ಸಭೆ ಸಂಘಟನಾ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆಯಿತು.

ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು-ನಾವೂರು ಘಟಕದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಮತ್ತು ಹಿರಿಯರ ಉಪಸ್ಥಿತಿಯಲ್ಲಿ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷರಾಗಿ ಧರ್ಣಪ್ಪ ಮೂಲ್ಯ ನಾವೂರು, ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಗುಡಿಗಾರ್ ಮುಂಡ್ರಬೆಟ್ಟು, ಉಪಾಧ್ಯಕ್ಷರಾಗಿ ಪಳನಿ ಸ್ವಾಮಿ ಪಿ.ಆರ್., ಗೋಪಾಲಕೃಷ್ಣ ಓಡ್ರಬೆಟ್ಟು, ಹರೀಶ್ ಅಂಕರಿಮಾರು, ಕೋಶಾಧಿಕಾರಿಯಾಗಿ ಸಂತೋಷ್ ಎಂ. ಇಂದಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಗಣೇಶ್ ಕೃಪಾ ಇಂದಬೆಟ್ಟು, ಜೊತೆ ಕೋಶಾಧಿಕಾರಿಯಾಗಿ ಸಂತೋಷ್ ದೇರಾಜೆ ಬೆದ್ರಬೆಟ್ಟು,
ಸರ್ವಾನುಮತದಿಂದ ಆಯ್ಕೆಯಾದರು.

Exit mobile version