Site icon Suddi Belthangady

ಬೆಳಾಲು ರಬ್ಬರ್ ಪ್ರೊಡ್ಯೂಸರ್ ಸೊಸೈಟಿಯಿಂದ ರೈತರಿಗೆ ಸಬ್ಸಿಡಿ ವಿತರಣೆ

ಬೆಳಾಲು: ರಬ್ಬರ್ ಪ್ರೊಡ್ಯೂಸರ್ ಸೊಸೈಟಿ ಮತ್ತು ರಬ್ಬರ್ ಬೋರ್ಡ್ ವತಿಯಿಂದ ಮಳೆ ಗಳದಲ್ಲಿ ರೈನ್ ಗಾರ್ಡ್ ಹಾಕಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವ ಸೊಸೈಟಿಯ 14 ಮಂದಿ ಸದಸ್ಯರಿಗೆ ಜೂ. 28 ರಂದು ಬೆಳಾಲು ಸಹಕಾರ ಸಂಘದಲ್ಲಿ ಸಬ್ಸಿಡಿ ವಿತರಣೆ ಮಾಡಲಾಯಿತು.

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡ ಸಬ್ಸಿಡಿ ಚೆಕ್ ವಿತರಿಸಿದರು. ಬೆಳಾಲು ರಬ್ಬರ್ ಪ್ರೊಡ್ಯೂಸರ್ ಸೊಸೈಟಿ ಅಧ್ಯಕ್ಷ ದಾಮೋದರ ಗೌಡ ಸುರುಳಿ, ಉಪಾಧ್ಯಕ್ಷ ವಿಜಯ ಗೌಡ, ನಿರ್ದೇಶಕರಾದ
ಉಷಾದೇವಿ ಕಿಣ್ಯಾಜೆ, ಸುರೇಶ್ ಭಟ್ ಪರಂಗಾಜೆ, ಜಾಯ್ ನಾಯರಕಂಡ, ವಸಂತ ನಾಯ್ಕ ಪಲ್ಲಿದಡ್ಕ, ರೈತರು ಉಪಸ್ಥಿತರಿದ್ದರು.

ಸಹಕಾರ ಸಂಘದ ಸಿಬ್ಬಂದಿ ಅವಿನಾಶ್ ಸ್ವಾಗತಿಸಿ, ವಿಜಯ ಗೌಡ ವಂದಿಸಿದರು.

Exit mobile version