Site icon Suddi Belthangady

ಧರ್ಮಸ್ಥಳ: ಡಾ.ಡಿ.ವೀರೇಂದ್ರ ಹೆಗ್ಗೆಡೆಯವರನ್ನು ಭೇಟಿಯಾದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ. ಶಿವಪ್ರಕಾಶ್ ಡಿ.ಎಸ್. ಮತ್ತು ಆರೋಗ್ಯ ರಕ್ಷಾ ಸಮಿತಿ ಸದಸ್ಯರ ತಂಡ

ಧರ್ಮಸ್ಥಳ: ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ವೆನ್ಲಾಕ್ ಆಸ್ಪತ್ರೆಗೆ 175 ವರ್ಷ ತುಂಬಿದ ಪ್ರಯುಕ್ತ ಸಂಭ್ರಮಾಚರಣೆಯು ಬರುವ ಸೆ.14ರಂದು ವೆನ್ಲಾಕ್, ಲೇಡಿಗೋಷನ್, ಕೆ.ಎಮ್.ಸಿ. ಆಸ್ಪತ್ರೆಗಳ ಸಹಬಾಗಿತ್ವದಲ್ಲಿ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದಾರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಭಾದ್ಯಕ್ಷರಾದ ಯು.ಟಿ ಖಾದರ್, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಸೇರಿದಂತೆ ಹಲವಾರು ಸಚಿವರು,ಸಂಸದರು, ರಾಜ್ಯಸಭಾ ಸದಸ್ಯರು, ಜಿಲ್ಲೆಯ ಎಲ್ಲಾ ಶಾಸಕರು, ವಿದಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಯ ಅಧ್ಯಕ್ಷರುಗಳು, ಜಿಲ್ಲೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಜೂ. 26ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ.ಶಿವಪ್ರಕಾಶ್ ಡಿ.ಎಸ್. ಭೇಟಿ ಮಾಡಿದರು.

ಜೊತೆಯಲ್ಲಿ ಪಲಿಯೇಟಿವ್ ಮೆಡಿಕಲ್ ಆಫೀಸರ್ ಡಾ. ಅನ್ನಯ್ಯ ಕುಲಾಲ್, ಪಿಸಿಷಿಯನ್ ಡಾ.ವಿಜಯ ಕುಮಾರ್, ರಕ್ಷಾ ಸಮಿತಿಯ ಪದ್ಮನಾಭ ಅಮೀನ್, ಅಬ್ದುಲ್ ಕರೀಮ್ ಗೇರುಕಟ್ಟೆ, ಶಶಿದರ್ ಬಜಾಲ್, ಅಬ್ದುಲ್ ಸಲೀಮ್, ಪ್ರಮೀಳಾ, ದಾಮೋದರ್ ಪುತ್ತೂರು, ಜಯರಾಮ ಬೆಳ್ತಂಗಡಿ, ವಕ್ಫ್ ಸಲಹಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಸಹಾಯಕ ಆಡಳಿತಾಧಿಕಾರಿಗಳಾದ ವಿದ್ಯಾ ಬಿ, ಕಛೇರಿ ಅಧೀಕ್ಷಕರಾದ ಅಶೋಕ್ ರಾಜನಾಲ್, ದ್ವಿತೀಯ ದರ್ಜೆ ಸಹಾಯಕ ಎ.ಕ್ಲೆರೆನ್ಸ್ ರಾಜ್, ಸಿಬ್ಬಂದಿ ಸಿದ್ದಪ್ಪ ಹಾಗೂ ಉಸ್ಮಾನ್ ಕೆ.ಪಿ. ಕಾಜೂರು ಹಾಜರಿದ್ದರು.

Exit mobile version