Site icon Suddi Belthangady

ಶಿಶಿಲ ದೇವಾಲಯ ವ್ಯವಸ್ಥಾಪನಾ ಸಮಿತಿ ವಿಳಂಬ: ಗ್ರಾಮಸ್ಥರಲ್ಲಿ ಆಕ್ರೊಶ: ಸಮಿತಿ ರಚಿಸುವವರೆಗೂ ದೇವಳದಲ್ಲಿ ಧರಣಿ ನಡೆಸುವ ಎಚ್ಚರಿಕೆ

ಶಿಶಿಲ: ಇತಿಹಾಸ ಪ್ರಸಿದ್ಧ ಶಿಶಿಲೇಶ್ವರ ಪುಣ್ಯಕ್ಷೇತ್ರದಲ್ಲಿ ರಾಜಕೀಯ ವ್ಯವಸ್ಥೆಯಿಂದ ಇನ್ನೂ ವ್ಯವಸ್ಥಾಪನಾ ಸಮಿತಿ ಆಗದೆ ಎರಡು ವರ್ಷ ಆಗಿರುತ್ತದೆ. ದೇವಾಲಯದ ಎಲ್ಲಾ ಅಭಿವೃದ್ಧಿ ಕಾರ್ಯ ನಿಂತಿರುತ್ತದೆ. ಸಾವಿರಾರು ಊರ‌ ಪರವೂರಿಂದ ಭಕ್ತಾದಿಗಳು ಬರುತ್ತಿದ್ದಾರೆ.ಅನ್ನ ದಾಸೊಹ ನಡೆಯುತ್ತಿದೆ. ಮತ್ಸ್ಯ ಸಂಕುಲಗಳಿದ್ದು. ಕೃಷಿ ನಿರ್ವಹಣೆ ಆಗಬೆಕಾಗಿದೆ.

ಹೀಗಿದ್ದರೂ ವ್ಯವಸ್ಥಾಪನಾ ಸಮಿತಿ ರಚನೆ ಆಗದೇ ಒಟ್ಟಾರೆ ದೇವಳದ ಅಭಿವೃದ್ಧಿ ಕುಂಟಿತಗೊಂಡಿದ್ದು. ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದ ದೇವಳದ ತಡೆಗೋಡೆ ಕುಸಿದು ದೇವಳದ ಒಳಗಡೆ ನೀರು ನುಗ್ಗಿ ಅಸ್ತವ್ಯಸ್ತವಾಗಿದೆ. ಇದರಿಂದ ಗ್ರಾಮಸ್ಥರು ಕೋಪಗೊಂಡಿದ್ದು ತಕ್ಷಣವೇ ಧರಣಿ ಕೂರುವ ಎಚ್ಚರಿಕೆ ನೀಡಿದ್ದು ಧರಣಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಧರ್ಮದಾಯ ದತ್ತಿ ಇಲಾಖೆಯವರು ಆಗಮಿಸಿ ಸ್ಥಳದಲ್ಲಿ ಸಮಿತಿ ರಚಿಸಿ ಕೊಡುವವರೆಗೂ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು, ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ಜಯರಾಮ್ ನೆಲ್ಲಿತ್ತಾಯ, ಕರುಣಾಕರ ಶಿಶಿಲ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.

Exit mobile version