ಕಾಶಿಪಟ್ಣ: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಕಾಶಿಪಟ್ಣ ಶಾಖೆ ವತಿಯಿಂದ ಸಮಸ್ತ 100ನೇ ಸ್ಥಾಪಕ ದಿನದ ಪ್ರಯುಕ್ತ ಧ್ವಜಾರೋಹಣ ಹಾಗೂ ಖಬರ್ ಝಿಯಾರತ್ ಸಿಹಿ ತಿಂಡಿ ವಿತರಣೆ ಕಾರ್ಯಕ್ರಮ ಎಮ್.ಜೆ.ಎಮ್ ವಠಾರದಲ್ಲಿ ನಡೆಯಿತು.
ಜಮಾಅತ್ ಅಧ್ಯಕ್ಷ ಕೆ.ಎಸ್. ಪುತ್ತುಮೋನು ಧ್ವಜಾರೋಹಣಗೈದರು. ಸ್ಥಳೀಯ ಖತೀಬ ಎಸ್. ಎ. ಅಬೂಬಕ್ಕರ್ ನಿಝಾಮಿ ಸೋಮಂತ್ತಡ್ಕ ಪ್ರಾರ್ಥಿಸಿ, ಸಮಸ್ತ ನೂರನೇ ವಾರ್ಷಿಕದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು, ಎಸ್.ಕೆ.ಎಸ್.ಎಸ್.ಎಫ್ ಕಾಶಿಪಟ್ಣ ಶಾಖೆ ಅಧ್ಯಕ್ಷ ಅಬ್ದುಲ್ ಹಮೀದ್ ಸ್ವಾಗತಿಸಿದರು. ಜಮಾಅತ್ ಉಪಾಧ್ಯಕ್ಷ ಶಬೀರ್, ಎಸ್.ಕೆ.ಎಸ್.ಎಸ್.ಎಫ್ ಪಡ್ಡಂದಡ್ಕ ಕ್ಲಸ್ಟರ್ ಅಧ್ಯಕ್ಷ ಖಾಲಿದ್ ಅಬ್ದುಲ್ ಖಾದಿರ್, ಅಬೂಸ್ವಾಲಿಹ್ ಮಸೀದಿ ಕೆ.ಎಸ್. ಹಿಶಾಮ್, ಎಸ್.ಕೆ.ಎಸ್.ಬಿ.ವಿ ಕಾರ್ಯದರ್ಶಿ ಮುಹಮ್ಮದ್ ಸಿಹಾಮ್, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಅಬ್ದುಲ್ ಹಮೀದ್ ವಂದಿಸಿ, ಮೂರು ಸ್ವಲಾತಿನೊಂದಿಗೆ ಮುಕ್ತಾಯವಾಯಿತು.