Site icon Suddi Belthangady

ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ಮಂತ್ರಿಮಂಡಲದ ಉದ್ಘಾಟನೆ

ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಮಂತ್ರಿ ಮಂಡಲದ ಉದ್ಘಾಟನಾ ಸಮಾರಂಭವು ಜೂ. 25ರಂದು ನಡೆಯಿತು.

ಕಾರ್ಯಕ್ರಮವನ್ನು ಶಾಲಾ ಸಂಚಾಲಕ ಫಾ. ಎಲಿಯಸ್ ಡಿಸೋಜ ಮುಖ್ಯ ಅತಿಥಿ ಶಿವ ಪ್ರಸಾದ್ ಅಜಿಲರು, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಲಿಯೋ ಪಿರೇರ, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಶ್ಯಾಮ್ ಸುಂದರ್ ಭಟ್, ಮುಖ್ಯ ಶಿಕ್ಷಕಿ ಮೋನಿಕಾ ಡಿಸೋಜ ಅವರು ಉದ್ಘಾಟಿಸಿದರು. ಶಾಲಾ ನಾಯಕಿಯಾಗಿ ಅನ್ವಿಶಾ ಸಾನಿಕ ಪಾಯ್ಸ್, ಉಪ ನಾಯಕನಾಗಿ ಯಕ್ಷಿತ್, ಸ್ಪೀಕರ್ ಆಗಿ ಪ್ರತೀಕ್ಷ, ಶಿಸ್ತಿನ ಮಂತ್ರಿಯಾಗಿ ಸಾನ್ವಿ, ಶಿಸ್ತಿನ ಸಹಾಯಕ ಮಂತ್ರಿಯಾಗಿ ಪವನ್, ಆರೋಗ್ಯ ಮಂತ್ರಿಯಾಗಿ ನಿರೀಕ್ಷಾ, ಉಪ ಆರೋಗ್ಯ ಮಂತ್ರಿಯಾಗಿ ಆಕಾಶ್, ಸಾಂಸ್ಕೃತಿಕ ಮಂತ್ರಿಯಾಗಿ ಅಶ್ರಿತ್, ಕ್ರೀಡಾ ಮಂತ್ರಿಯಾಗಿ ಸೃಜನ್ ಸಾಲಿಯನ್, ಸಹ ಕ್ರೀಡಾ ಮಂತ್ರಿಯಾಗಿ ಋತ್ವಿಕ್ ರಾಜ್. ಆಹಾರ ಮಂತ್ರಿಯಾಗಿ ಮೆಲಿಟಾ ಮೋನಿಸ್ ಆಯ್ಕೆಆಗಿದ್ದಾರೆ.

ಮುಖ್ಯ ಶಿಕ್ಷಕಿ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸರಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವ ಪ್ರಸಾದ್ ಅಜಿಲರ ಷಷ್ಠ್ಯಬ್ಧ ಸಂಭ್ರಮ ಹಾಗೂ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿ, ಸನ್ಮಾನಿಸಲಾಯಿತು. ಶಿವಪ್ರಸಾದ್ ಅಜಿಲರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಮುಂದಿನ ಜೀವನದಲ್ಲಿ ಉತ್ತಮ ನಾಯಕರಾಗಿ ದೇಶ ಸೇವೆ ಮಾಡಬೇಕು ಎಂದು ತಿಳಿಸಿದರು.

ಶಾಲಾ ಸಂಚಾಲಕ ಫಾ. ಎಲಿಯಸ್ ಡಿಸೋಜ ವಿದ್ಯಾರ್ಥಿ ನಾಯಕರು ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನೆರವೇರಿಸಲು ಶಿಕ್ಷಕ ವೃಂದದೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು. ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹಶಿಕ್ಷಕಿ ಪ್ರೇಮ ಸ್ವಾಗತಿಸಿ, ಸಹ ಶಿಕ್ಷಕಿ ಸಿಸ್ಟರ್ ಮೋಳಿ ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ಜೇಸಿನಾ ಧನ್ಯವಾದವಿತ್ತರು.

Exit mobile version