Site icon Suddi Belthangady

ರಾಷ್ಟ್ರೀಯ ಕಬ್ಬಡಿ ಪಂದ್ಯಾಟಕ್ಕೆ ಎಸ್.ಡಿ.ಎಂ ಕಾಲೇಜಿನ ಅನನ್ಯ ಆಯ್ಕೆ

ಉಜಿರೆ: 18 ವರ್ಷ ವಯೋಮಿತಿಯ ಬಾಲಕಿಯರ ರಾಷ್ಟ್ರೀಯ ಕಬ್ಬಡಿ ಪಂದ್ಯಾಟವು ಉತ್ತರಖಂಡ್ ನ ಹರಿದ್ವಾರದ ರಾಣಿಪುರದಲ್ಲಿ ಜೂ.28ರಿಂದ ಜುಲೈ 1ರವರೆಗೆ ನಡೆಯಲಿದ್ದು, ಇದರ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಎಸ್.ಡಿ.ಎಂ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿನಿ ಅನನ್ಯ ಅವರು ಆಯ್ಕೆಯಾಗಿದ್ದಾರೆ. ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಕ ಕೃಷ್ಣಾನಂದ ರಾವ್, ಕಾಲೇಜಿನ ಕಾರ್ಯದರ್ಶಿ ರಮೇಶ್ ಹೆಚ್ ಮಾರ್ಗದರ್ಶನ ನೀಡಿದ್ದಾರೆ.

Exit mobile version