Site icon Suddi Belthangady

ಬಂಗಾಡಿ ರಸ್ತೆಯನ್ನು ಸುತ್ತುವರಿದ ಮಳೆಯ ನೀರು: ವಾಹನ ಸಂಚಾರಕ್ಕೆ ಅಡ್ಡಿ

ಬಂಗಾಡಿ: ಬೆಳ್ತಂಗಡಿ – ಕೊಲ್ಲಿಗೆ ಸಂಪರ್ಕಿಸುವ ರಸ್ತೆಯ ಬಂಗಾಡಿ ಬಸದಿಯ ಮುಂಬಾಗ ಹಾಗೂ ಸಿಎ ಬ್ಯಾಂಕ್ ನ ಪ್ರಧಾನ ಕಛೇರಿ, ಸ.ಹಿ. ಪ್ರಾಥಮಿಕ ಶಾಲೆಯ ಸಮೀಪ ಮತ್ತು ಕೆನರಾ ಬ್ಯಾಂಕ್ ಶಾಖೆಯವರೆಗೂ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದ್ದರು. ಯಾವುದೇ ರೀತಿಯಲ್ಲಿ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಜನರು ರಸ್ತೆಯ ಅವಸ್ಥೆ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತೀ ವರ್ಷ ಮಳೆ ಬಂದರೆ ಇದೇ ಪರಿಸ್ಥಿತಿ. ಇದರ ಬಗ್ಗೆ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ಅಧಿಕಾರಿಗಳು ಗಮನಹರಿಸಬೇಕಾಗಿದೆ. ಎರಡೂ ಬದಿಯಲ್ಲಿ ಚರಂಡಿ ಇಲ್ಲದೆ ಈ ಪರಿಸ್ಥಿತಿ ಉಂಟಾಗಿದೆ.

Exit mobile version