Site icon Suddi Belthangady

ಉಜಿರೆ: ಅಪರಿಚಿತ ಮೃತದೇಹ ಪತ್ತೆ

ಬೆಳ್ತಂಗಡಿ: ಉಜಿರೆ ಪೇಟೆಯಲ್ಲಿ ಜೂ.24ರಂದು ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉಜಿರೆ ಪೇಟೆಯಲ್ಲಿ ಮೃತದೇಹ ಪತ್ತೆಯಾಗಿದ್ದು ಗ್ರಾಮ ಪಂಚಾಯತು ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಮಾರು 45ರಿಂದ 50ವರ್ಷ ಪ್ರಯಾದ ವ್ಯಕ್ತಿಯ ಮೃತದೇಹ ಇದಾಗಿದ್ದು ಎಡ ಕೈಯಲ್ಲಿ G MAHESH ಎಂದೂ ಬಲ ಕೈಯಲ್ಲಿ ABGTK ಎಂದೂ ಬರೆಯಲಾಗಿದೆ.

ಮೃತರ ವಾರಿಸುದಾರರು ಯಾರಾದರೂ ಇದ್ದಲ್ಲಿ ಬೆಳ್ತಂಗಡಿ ಠಾಣೆಯನ್ನು ಅಥವಾ 9480805370 / 08256232090 ಕ್ಕೆ ಸಂಪರ್ಕಿಸಲು ಕೋರಲಾಗಿದೆ.

Exit mobile version