Site icon Suddi Belthangady

ಧೀಮಹಿ ಸನಾತನ ಪ್ರತಿಷ್ಠಾನದಿಂದ ಯಕ್ಷಗಾನ ಹಿಮ್ಮೇಳ ತರಗತಿ ಆರಂಭ

ವೇಣೂರು: ಮಹಾವೀರ ನಗರದಲ್ಲಿನ ಧೀಮಹಿ ಸನಾತನ ಪ್ರತಿಷ್ಠಾನದಿಂದ ನಡೆಸಲ್ಪಡುವ ಯಕ್ಷಗಾನ ಹಿಮ್ಮೇಳ ತರಗತಿಯ ಉದ್ಘಾಟನೆಯನ್ನು
ಗೌರಮ್ಮ ಅವರು ದೀಪ ಪ್ರಜ್ವಲಿಸುವ ಮೂಲಕ ಜೂ.22ರಂದು ನೆರವೇರಿಸಿದರು. ಧೀಮಹಿ ಸನಾತನ ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನು ಪ್ರಸ್ತಾವಿಕ ನುಡಿಯಲ್ಲಿ ಸಂಚಾಲಕರಾದ ಯಜ್ಞನಾರಾಯಣ ಭಟ್ ಅವರು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಂಜಾಲಬೈಲು ಎನ್. ಪುರುಷೋತ್ತಮ ರಾವ್, ಭಾಸ್ಕರ ಪೈ ಹಾಗೂ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಾಣೂರು ಅಶೋಕ ಅವರು ಶುಭ ಹಾರೈಸಿದರು. ಯಕ್ಷಗಾನ ತರಗತಿಯ ಗುರುಗಳಾಗಿ ಖ್ಯಾತ ಹಿಮ್ಮೇಳವಾದಕ ಕೊಂಕಣಾಜೆ ಚಂದ್ರಶೇಖರ ಭಟ್ ಅವರು ಬೋಧನಾ ಕ್ರಮದ ಬಗ್ಗೆ ಪರಿಚಯಿಸಿದರು. ನೂರಕ್ಕೂ ಅಧಿಕ ಯಕ್ಷಭಿಮಾನಿಗಳು ನೆರೆದಿದ್ದರು. ಜಗನ್ನಾಥ ದೇವಾಡಿಗ ಹಂದೇವು ಕಾರ್ಯಕ್ರಮ ನಿರೂಪಣೆ ಮಾಡಿದರು. ರವಿಶಂಕರ ಭಟ್ ಬೆದ್ರಡ್ಕ ವಂದಿಸಿದರು. ಹಿಮ್ಮೇಳ ಕಲಿಯಲು ಆಸಕ್ತರು ಕೊಂಕಣಾಜೆ ಚಂದ್ರಶೇಖರ ಭಟ್ಟರನ್ನು +91 90081 36127 ಸಂಪರ್ಕಿಸಬಹುದು.

Exit mobile version