Site icon Suddi Belthangady

ರಾಜ್ಯ ವಿರೋಧಿ ನೀತಿಯನ್ನು ಖಂಡಿಸಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಂದೆ ಪ್ರತಿಭಟನೆ

ಬೆಳ್ತಂಗಡಿ: ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾದರೂ ಸೂಸುತ್ರವಾಗಿ ಆಡಳಿತ ನಡೆಸದೆ ಭೂಮಾಫಿಯ, ಪಟ್ಟಭದ್ರ ಹಿತಾಸಕ್ತಿಗಳಿಂದ ಜನರಿಗೆ ಸುಲಭ ರೀತಿಯ ಸೇವೆ ದೊರಕದೆ ಭಷ್ಟಚಾರದ ಕೂಪದಿಂದ ಶ್ರೀಸಾಮಾನ್ಯರ ಹಣ ದೋಚಲು ಅವೈಜ್ಞಾನಿಕ ನಿಯಮ ರೂಪಿಸಿ ಅಲೆದಾಟದ ಭಾಗ್ಯ ಒದಗಿಸಿರುವುದನ್ನು ಭಾರತೀಯ ಜನತಾ ಪಾರ್ಟಿ ಖಂಡಿಸಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು. ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ವಕೀಲ ಅನಿಲ್ ಕುಮಾರ್,ಪ್ರಮುಖರಾದ ಶಂಕರ, ಉಷಾ, ರಜನಿ ಕುಡ್ವ ಉಪಸ್ಥಿತರಿದ್ದರು. ಪ್ರತಿಭಟನೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

Exit mobile version