Site icon Suddi Belthangady

ಮುಂಡಾಜೆ: ವಿದ್ಯುತ್ ಶಾಕ್ ಗಬ್ಬದ ಹಸು ಸಾವು

ಮುಂಡಾಜೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಗಬ್ಬದ ಹಸು ಸಾವನ್ನಪ್ಪಿದ ಘಟನೆ ಜೂ.22ರಂದು ನಡೆದಿದೆ. ಮುಂಡಾಜೆ ಗ್ರಾಮದ ಗುಂಡಿ ಸೇತುವೆ ಸಮೀಪ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಹಸುವಿನ ಕೊಂಬಿಗೆ ತಾಗಿದ್ದು, ಈ ವೇಳೆ ತಂತಿಯನ್ನು ಎಳೆದಾಡಿದ ಹಸು ಶಾಕ್ ನಿಂದ ಸ್ಥಳದಲ್ಲೇ ಮೃತಪಟ್ಟಿತು.

ಸ್ಥಳೀಯ ಕೊಂಬಿನಡ್ಕದ ಶಿವಪ್ಪ ಶೆಟ್ಟಿ ಎಂಬವರ 4ವರ್ಷ ಪ್ರಾಯದ ಹಸು ಇದಾಗಿದ್ದು, ಮೆಸ್ಕಾಂ ಅಧಿಕಾರಿಗಳು, ಪಶು ಇಲಾಖೆ ಅಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Exit mobile version