Site icon Suddi Belthangady

ಸ.ಪ್ರೌ.ಶಾಲೆ ಬೆಳ್ತಂಗಡಿಯಲ್ಲಿ ಆಭರಣ ಜುವೆಲ್ಲರ್ಸ್ ಸಹಭಾಗಿತ್ವದಲ್ಲಿ ವಿಶ್ವ ಯೋಗ ದಿನಾಚರಣೆ

ಬೆಳ್ತಂಗಡಿ: ಸರಕಾರಿ ಪ್ರೌಢಶಾಲೆ ಬೆಳ್ತಂಗಡಿಯಲ್ಲಿ ಆಭರಣ ಜುವೆಲ್ಲರ್ಸ್ ಸಹಭಾಗಿತ್ವದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಜೂ.21ರಂದು ಆಚರಿಸಲಾಯಿತು.

ಆಭರಣ ಜುವೆಲ್ಲರ್ಸ್ ಬೆಳ್ತಂಗಡಿಯ ಮ್ಯಾನೇಜರ್ ಶ್ರೀ ವಿಜೇಶ್ ಹೆಗ್ಡೆ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಆಭರಣ ಜುವೆಲ್ಲರ್ಸ್ ವತಿಯಿಂದ ವಿಶ್ವ ಯೋಗ ದಿನದ ಅಂಗವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಶಾಲೆಯ 25 ವಿದ್ಯಾರ್ಥಿಗಳಿಗೆ ಆಕರ್ಷಕವಾದ ಟೀ ಶರ್ಟ್ ವಿತರಿಸಲಾಯಿತು. ಮಕ್ಕಳಿಂದ ಚಿತ್ತಾಕರ್ಷಕವಾದ ಯೋಗ ಪ್ರದರ್ಶನ ನಡೆಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಕುಮುದಾ ಯೋಗ ಸಂಕಲ್ಪ ನಡೆಸಿಕೊಟ್ಟರು. ಮುಖ್ಯಶಿಕ್ಷಕಿ ಪೂರ್ಣಿಮಾ ಯೋಗದ ಮಹತ್ವ ತಿಳಿಸಿದರು.

ವೇದಿಕೆಯಲ್ಲಿ ಆಭರಣ ಜುವೆಲ್ಲೆರ್ಸ್ ನ ಸಿಬ್ಬಂದಿಗಳಾದ ಶೈಲೇಶ್, ದೇವಿಕಾ, ಶೃತಿ ಹಾಗೂ ಶಾಲಾ ಹಿರಿಯ ಶಿಕ್ಷಕಿ ಪದ್ಮಜಾ, ಶಿಕ್ಷಕರಾದ ತಾರನಾಥ, ಮಹೇಶ್ ನಿಲಜಿ, ಸಂತೋಷ್, ಶೋಭಾ, ಪೂರ್ಣಿಮಾ, ಪುಷ್ಪಲತ, ದಿವ್ಯಶ್ರೀ ಸಹಕರಿಸಿದರು. ನಾರಾಯಣ ಗೌಡ ಸ್ವಾಗತಿಸಿದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version