ಬೆಳ್ತಂಗಡಿ: ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜು, ಕಲ್ಲಬೆಟ್ಟು ಮೂಡುಬಿದಿರೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು.
ಸಂಸ್ಥೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಸುಮಾರು ಒಂದು ಗಂಟೆಗಳ ಕಾಲ ಆಯುಷ್ ಮಂತ್ರಾಲಯ ಸೂಚಿಸಿದ ಸಾಮಾನ್ಯ ಯೋಗಾಭ್ಯಾಸ ಕ್ರಮವನ್ನು ವಿದ್ಯಾರ್ಥಿಗಳು ಅನುಸರಿಸಿದರು. ವೃಂದಾ ಬೆಡೇಕರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಯೋಗಾಸನದ ಮಹತ್ವವನ್ನು ತಿಳಿ ಹೇಳಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಟ್ರಸ್ಟಿಗಳಾದ ಮೆಹಬೂಬ್ ಭಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೇಕರ್, ಸುಭಾಶ್ ಝಾ, ಎಸ್. ಎನ್. ವೆಂಕಟೇಶ್ ನಾಯಕ್, ಶರತ್ ಗೋರೆ ಉಪಸ್ಥಿತರಿದ್ದರು.