Site icon Suddi Belthangady

ಧರ್ಮಸ್ಥಳ: ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ಚುನಾವಣೆ

ಧರ್ಮಸ್ಥಳ: ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸರ್ಕಾರ ಚುನಾವಣೆ ಜೂ.18ರಂದು ನಡೆಯಿತು.

ಚುನಾವಣೆ ಪ್ರಕ್ರಿಯೆಗಳಾದ ಅಧಿಸೂಚನೆ ಹೊರಡಿಸುವುದು, ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಮತ ಪ್ರಚಾರ, ಮತದಾನ ಪ್ರಕ್ರಿಯೆ, ಮತದಾನ ಗೌಪ್ಯತೆ, ಫಲಿತಾಂಶ ಪ್ರಕಟಣೆ ಮುಂತಾದ ಪ್ರಕ್ರಿಯೆಗಳನ್ನು ನೈಜ ಮತದಾನದ ರೀತಿಯಲ್ಲಿ ನಡೆಸಲಾಯಿತು.

ಮುಖ್ಯ ಶಿಕ್ಷಕಿ ಜಯಶ್ರೀ ಜೈನ್, ಚುನಾವಣಾಧಿಕಾರಿ ಶಿಕ್ಷಕ ವಿಕಾಸ್ ಆರಿಗ ಹಾಗೂ ಇತರ ಶಿಕ್ಷಕ ವರ್ಗದ ಸಹಯೋಗದೊಂದಿಗೆ ಪ್ರಕ್ರಿಯೆ ನಡೆಯಿತು.

ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿ ಬಿ ವಿಭಾಗದ ಹರ್ಷಿತ್, ಉಪನಾಯಕನಾಗಿ 9ನೇ ತರಗತಿ ಬಿ ವಿಭಾಗದ ಅಜಯ್, ಉಪೋಪನಾಯಕನಾಗಿ 8ನೇ ತರಗತಿ ಬಿ ವಿಭಾಗದ ವಿಜಿತ್ ಚುನಾಯಿತರಾದರು.

Exit mobile version