Site icon Suddi Belthangady

ಕೊಕ್ಕಡ: ಅಡಿಕೆ ವ್ಯಾಪಾರಿಗೆ ವಂಚನೆ-ದೂರು

ಕೊಕ್ಕಡ: ಅಡಿಕೆ ಖರೀದಿಸಿ ಹಣ ಪಾವತಿಸದೇ ವಂಚಿಸಲಾಗಿದೆ ಎಂದು ಆರೋಪಿಸಿ ಕೊಕ್ಕಡದ ಅಡಿಕೆ ವ್ಯಾಪಾರಿಯೊಬ್ಬರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕೊಕ್ಕಡ ಅಪೇಕ್ಷಾ ಕಾಂಪ್ಲೆಕ್ಸ್‌ನಲ್ಲಿ ಎ-1 ಸುಪಾರಿ ಅಂಗಡಿಯಲ್ಲಿ ಕಳೆದ 15 ವರ್ಷಗಳಿಂದ ಅಡಿಕೆ ವ್ಯಾಪಾರ ಮಾಡುತ್ತಿದ್ದ ಆಶ್ರಫ್ ಗ್ರಾಹಕರಿಂದ ಖರೀದಿಸಿದ 1,950 ಕಿಲೋ ಚಾಲಿ ಅಡಿಕೆಯನ್ನು ಭರತ್ ಮಂಜಿಬಾಯಿ ಮುಖಾಂತರ ನಿರಾಜ್ ಭವಿಶ್ ಬಾಯಿ ಬೋರ್ಡ್ ನವರು ಖರೀದಿಸುವುದಾಗಿ ತಿಳಿಸಿದ್ದರು. ಆಶ್ರಫ್ ಅವರು ತಲಾ 65 ಕೆ.ಜಿ.ಯಂತೆ 30 ಚೀಲಗಳಲ್ಲಿ ಅಡಿಕೆಯನ್ನು ಜ.18ರಂದು ಸೌತ್ ಇಂಡಿಯನ್ ಟ್ರಾನ್ಸ್ ಪೋರ್ಟ್ ಇದರ ವಾಹನ ಸಂಖ್ಯೆ ಕೆಎ-21ಬಿ-1664ರಲ್ಲಿ ಸಾಗಾಟ ಮಾಡಲು ತಿಳಿಸಿದಂತೆ ಸಾಗಾಟ ಶುಲ್ಕದೊಂದಿಗೆ ಮಾರಾಟ ಇನ್ವಾಯಿಸ್ ಲಗತ್ತಿಸಿ ಕಳುಹಿಸಿ ಕೊಟ್ಟಿದ್ದಾರೆ.

ಆದರೆ ಅಡಿಕೆಯನ್ನು ಖರೀದಿಸಿದ ನಿರಾಜ್ ಭವಿಶ್ ಬಾಯಿ ಬೋರ್ಡ್‌ನವರು 6,76,260 ರೂ. ಪಾವತಿಸುವುದಾಗಿ ತಿಳಿಸಿ ಈವರೆಗೂ ಪಾವತಿಸದೇ ವಂಚಿಸಿ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಅಶ್ರಫ್ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version