ಗುರುವಾಯನಕೆರೆ: ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯಾದ ನೀಟ್ ಫಲಿತಾಂಶ ಇದೀಗ ಪ್ರಕಟವಾಗಿದೆ.
ಗ್ರಾಮೀಣ ಪರಿಸರದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಪ್ರವನ್ ಪೊನ್ನಪ್ಪ ಎಂ. ಎನ್ 720 ಅಂಕಗಳ ಪೈಕಿ 594, ಪ್ರೀಮಲ್ 558, ಅನುಷಾ 551, ಮೊಹಮ್ಮದ್ ಸಫನ್ 542, ಅರುಲ್ ಡಿಸೋಜಾ 540, ಸಂದೀಪ್ 533, ನಿಶ್ಚಲ್ 532, ಶಾಂತವ್ವ 535, ಗೌತಮ್ 519, ಉಲ್ಲಾಸ್ 502, ವಿಜಯ್ ಕುಮಾರ್ 508, ಕೃಪಾ ಶಾಂಚಿ 508, ಪಾರೆಕ್ಷ ಕುಂದರ್ 519, ವಿನೀತ್ 511, ಇರಲ್ ಸಮಿಯ 518, ಸಾನಿಕ 542 ಅಂಕಗಳನ್ನು ಗಳಿಸಿಕೊಳ್ಳುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.
ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ರಾಜ್ಯದ ಇತಿಹಾಸದಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿರುವ ಎಕ್ಸೆಲ್ ಕಾಲೇಜಿನಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಅಭ್ಯಾಸ ಮಾಡುತ್ತಿದ್ದಾರೆ.ಗುರುವಾಯನಕೆರೆ: ಎಕ್ಸೆಲ್ ಪ. ಪೂ. ಕಾಲೇಜಿನ ಪ್ರವನ್ ಪೊನ್ನಪ್ಪ ನೀಟ್ ನಲ್ಲಿ 720ರಲ್ಲಿ 594 ಅಂಕ