ನಾರಾವಿ: ಅನುದಾನಿತ ಪ್ರೌಢ ಶಾಲೆಯಲ್ಲಿ 2 ವರ್ಷ ಪ್ರಭಾರ ಮುಖ್ಯ ಶಿಕ್ಷಕರಾಗಿ, 31 ವರ್ಷ ಶಿಕ್ಷಕಿಯಾಗಿ ಹಾಗೂ ಒಟ್ಟು 37 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಲಿಲ್ಲಿ ಪಾಯ್ಸ್ ರವರನ್ನು ಅವರ ಪತಿ ಡೆನಿಸ್ ಡಿಸೋಜಾರವರೂ ಸೇರಿದಂತೆ, ದಂಪತಿಗಳನ್ನು ಶಾಲಾ ಆಡಳಿತ ಮಂಡಳಿ – ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಾದರಗಳಿಂದ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಬೇಳ್ಕೊಡಲಾಯಿತು.
ಸ್ವಾ. ಜೆರೋಮ್ ಡಿಸೋಜಾ ಅಧ್ಯಕ್ಷತೆಯಲ್ಲಿ ನಡೆದ ಈ ವಿದಾಯ ಸಮಾರಂಭದಲ್ಲಿ ಪ್ರಸ್ತುತ ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ತುಳುಪುಳೆಯವರು ಸ್ವಾಗತಿಸಿದರು. ಶಿಕ್ಷಕ ಜಾನ್ಸನ್ ಡಿಕುನ್ಹಾ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಕಿ ಸುಜಾತಾ ಶುಭ ಹಾರೈಸಿ ಮಾತನಾಡಿದರು. ಸಂತ ಅಂತೋನಿ ಪದವಿ ಕಾಲೇಜ್ ನ ಪ್ರಾಂಶುಪಾಲ ಸ್ವಾ. ಆಲ್ವಿನ್ ಸೆರಾವೋ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಮಿರಾಂದಾ, ಸಂತ ಪಾವ್ಲರ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಿಚರ್ಡ್ ಮೋರಾಸ್, ಸಂತ ಪಾವ್ಲರ ಆಂಗ್ಲ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸೋಫಿಯಾ ಫೆರ್ನಾಂಡಿಸ್ ಅತಿಥಿಗಳಾಗಿಯೂ ಉಪಸ್ಥಿತರಿದ್ದು ಶುಭ ಕೋರಿದರು. ಶಿಕ್ಷಕ ವಿನೋದ್ ಮೋನಿಸ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕಿ ಕ್ರಿಸ್ತಬೆಲ್ ಸ್ನೇಹಲತಾ ವಂದಿಸಿದರು.