Site icon Suddi Belthangady

ನಾಮಫಲಕದಲ್ಲಿ ಮುದ್ರಾ ರಾಕ್ಷಸ! – ಸರಿಪಡಿಸಲು ಆಗ್ರಹ

ಮಚ್ಚಿನ: ಗ್ರಾಮದ ಮುಡಿಪಿರೆಯಿಂದ ನಾಳ ಹಾಗೂ ಮುಡಿಪಿರೆ ಯಿಂದ ಕುವೆಟ್ಟು ರಸ್ತೆಗಳು ಇತ್ತೀಚಿಗೆ ಕಾಂಕ್ರೀಟ್ ಗೊಂಡು ಲೋಕೋಪಯೋಗಿ ಇಲಾಖೆ ಯಿಂದ ಮಾರ್ಗಸೂಚಿ ನಾಮಫಲಕ ಹಾಕಲಾಗಿದೆ. ಆದರೆ ಅದರಲ್ಲಿ ಊರ ಹೆಸರುಗಳನ್ನು ತಪ್ಪಾಗಿ ಮುದ್ರಿಸಿ ಊರ ಜನರನ್ನು ರೊಚ್ಚಿಗೆಲ್ವಂತೆ ಮಾಡಿದೆ. ಹೀಗೆ ಇರಬೇಕಾದ ಹೆಸರುಗಳು ದೇವರಗುಂಡಿ
ಬರೆಮೇಲು, ಮರ್ಕೆ, ಪುರಳಿ, ಪಂಚಮಲಕೋಡಿ, ಬಿಳಿ ಬೈಲು, ತಿಮ್ಮನೊಟ್ಟು, ನಾಳ, ದತ್ತ ನಗರ, ಕುತ್ತಿನ, ಮುದಲಡ್ಕ, ಪಯ್ಯೊಟ್ಟು, ಸಬರಬೈಲು, ಕುವೆಟ್ಟು, ರಸ್ತೆಯ ನಾಮಫಲಕವನ್ನು ಲೋಕೋಪಯೋಗಿ ಇಲಾಖೆ ವಿಚಿತ್ರವಾದ ಹೆಸರುಗಳನ್ನು ಬರೆದು ದಾರಿ ತಪ್ಪುವಂತೆ ಮಾಡಿದೆ.

ಈ ನಾಮಫಲಕವನ್ನು ತಕ್ಷಣ ಬದಲಾವಣೆಗೊಳಿಸುವಂತೆ ಇಲಾಖೆಯಲ್ಲಿ ಊರ ಜನರ ಒತ್ತಾಯ. ( ಜನರು ಕೇಳುವಂತಹ ಪ್ರಶ್ನೆ ಒಂದು ಮಗುವಿನ ಹೆಸರಿನ ಒಂದು ಅಕ್ಷರವನ್ನು ತಿದ್ದುಪಡಿ ಮಾಡಲು ಶಾಲೆ ಲಾಯರ್ ಕೋರ್ಟು ಕಚೇರಿ ಹೀಗೆ 6ತಿಂಗಳು ಅಲೆದಾಡಿದರು ಸರಿಯಾಗುವುದಿಲ್ಲ ಆದರೆ ಲೋಕೋಪಯೋಗಿ ಇಲಾಖೆ, ಕ್ಷಣಮಾತ್ರದಲ್ಲಿ ಒಂದು ಊರಿನ ಹೆಸರನ್ನು ಬದಲಾವಣೆ ಮಾಡುತ್ತದೆ ಎಂದು) ಒಟ್ಟಿನಲ್ಲಿ ಮಾರ್ಗಸೂಚಿ ಸರಿಯಾಗಿದ್ದರೆ ಜನರು ದಾರಿ ತಪ್ಪದಂತೆ ಮಾಡಬಹುದು .✍️..ವರದಿ ಹರ್ಷ ಬಳ್ಳಮಂಜ

Exit mobile version