ಉಜಿರೆ: ಸ್ಪಾರ್ಟಅಪ್ ಇನ್ನುಬೇಶನ್ ಹಾಗೂ ಉದ್ಯಮಶೀಲತೆ ಉತ್ತೇಜಿಸುವ ಸಲುವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜು ನಫ್ಟ್ ಅಲೈನ್(nxtAlign) ಮತ್ತು ಟೆಲೊಕ್ವೆನ್ಸ್(Teloquence) ಎಂಬ ಸ್ಪಾರ್ಟನ್ ಕಂಪನಿಗಳೊಂದಿಗೆ ಒಡಂಬಡಿಕೆ(MoU) ಮಾಡಿಕೊಂಡಿರುತ್ತದೆ.
“ಈ ಸಹಯೋಗದ ಮೂಲಕ ವಿದ್ಯಾರ್ಥಿಗಳಿಗೆ ನವೀನ ತಂತ್ರಜ್ಞಾನಗಳಲ್ಲಿ ಅನುಭವ ಪಡೆಯಲು, ಸ್ವ-ಉದ್ಯಮ ಕೈಗೊಳ್ಳಲು ಸಹಾಯವಾಗುವಂತೆ ತಂತ್ರಜ್ಞರಿಂದ ಮಾರ್ಗದರ್ಶನ ಹಾಗೂ ನೈಜ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭಿಸಿರುವ ಈ ಅವಕಾಶವು ವಿದ್ಯಾರ್ಥಿಗಳನ್ನು ಉದ್ಯೋಗದಾತರನ್ನಾಗಿಯೂ ರೂಪಿಸಲು ಸಹಕಾರಿಯಾಗಿರುತ್ತದೆ” ಎಂದು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ ಚಂದ್ರ ಅಭಿಪ್ರಾಯಪಟ್ಟರು.
ಟೆಲೊಕ್ವೆನ್ಸ್ ನ ಮುಖ್ಯ ತಾಂತ್ರಿಕ ಅಧಿಕಾರಿ ಅಕ್ಷತಾ ಜೈನ್, ಪ್ರವೀಣ್ ಗೋರೆ (ಟೆಲೊಕ್ವೆನ್ಸ್), ನಕ್ಸ್ ಅಲೈನ್ ನಿರ್ದೇಶಕ ವಿಜಯ್, ಡಿಲೈತ್ ನಿರ್ದೇಶಕ ಅರುಣ್ ರಾಜಪುರೋಹಿತ್, ಕಾಲೇಜಿನ ಪ್ರಾಂಶುಪಾಲ ಅಶೋಕ್ ಕುಮಾರ್ ಮತ್ತು ಸ್ಪಾರ್ಟನ್‌ಸ್ಟೋರ್ ಸಂಯೋಜಕ ಬಸವ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.