Site icon Suddi Belthangady

ಟೈಸನ್ ಬ್ಯಾಪ್ಟಿಸ್ಟ್ ಡಿ ಕುನ್ಹಾ ಅವರಿಗೆ ಪಿಎಚ್‌ಡಿ

ಮಡಂತ್ಯಾರ್: ಟೈಸನ್ ಬ್ಯಾಪ್ಟಿಸ್ಟ್ ಡಿ ಕುನ್ಹಾ ಅವರಿಗೆ ಸುರತ್ಕಲ್‌ನ NITK ಯಿಂದ ವಿದ್ಯಾಸಂಸ್ಥೆಯಿಂದ ಪಿಎಚ್‌ಡಿ ನೀಡಿ ಗೌರವಿಸಲಾಗಿದೆ.

ಬೆಳ್ತಂಗಡಿಯ ಮಡಂತ್ಯಾ‌ರು ಮೂಲದ ಟೈಸನ್ ಬ್ಯಾಪ್ಟಿಸ್ಟ್ ಡಿ ಕುನ್ಹಾ ಅವರು Design and Development of Blockchain Based Authentication Protocols for lot Devices Using Physical Uncionable Functions ಎಂಬ ವಿಷಯದ ಮೇಲೆ ಬರೆದ ಪ್ರಬಂಧಕ್ಕಾಗಿ ಅವರಿಗೆ ಪಿ.ಎಚ್‌.ಡಿ ನೀಡಲಾಗಿದೆ.

ಅವರು ಸುರತ್ಕಲ್ ಎನ್‌ಐಟಿಕೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಡಾ. ಕಿರಣ್ ಎಂ ಅವರ ಮಾರ್ಗದರ್ಶನದಲ್ಲಿ ತಮ್ಮ ಡಾಕ್ಟರೇಟ್ ಸಂಶೋಧನೆ ನಡೆಸಿದ್ದರು. ಡಾ. ಟೈಸನ್ ಪ್ರಸ್ತುತ EG DK Pvt Ltd ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಬಂಧ ಸೈಬರ್ ಭದ್ರತೆ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಲಿದೆ.

Exit mobile version