Site icon Suddi Belthangady

ಬೆಳ್ತಂಗಡಿ ಪ್ರವಾಸಿ ತಾಣ ಪ್ರವೇಶಕ್ಕೆ ಅನುಮತಿ

ಬೆಳ್ತಂಗಡಿ : ನರಸಿಂಹಗಡ ಕೋಟೆ (ಗಡಾಯಿಕಲ್ಲು), ಕಡಮಗುಂಡಿ, ಬೊಳ್ಳೆ, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಜೂ.7ರಿಂದ ಎಂದಿನಂತೆ ಪ್ರವೇಶ ಮಾಡಲು ಅನುಮತಿ ನೀಡಲಾಗಿದೆ.

ನರಸಿಂಹಗಡ ಕೋಟೆ (ಗಡಾಯಿಕಲ್ಲು), ಕಡಮಗುಂಡಿ, ಬೊಳ್ಳೆ ಮತ್ತು ಬಂಡಾಜೆ ಜಲಪಾತಗಳಿಗೆ ಭೇಟಿ ನೀಡುವ ಪ್ರವಾಸಿಗರ ಭದ್ರತಾ ಹಿತದೃಷ್ಟಿಯಿಂದ ಪ್ರವಾಸಿಗರ ಸಂದರ್ಶನವನ್ನು ಮುಂದಿನ ಆದೇಶದವರೆಗೆ ಪ್ರವೇಶವನ್ನು
ನಿಷೇಧಿಸಿ ಮೇ.31ರಂದು ಬೆಳ್ತಂಗಡಿ ವನ್ಯಜೀವಿ ಅರಣ್ಯಾಧಿಕಾರಿ ಶರ್ಮಿಷ್ಠಾ ಆದೇಶ ಹೊರಡಿಸಿದ್ದರು.
ಇದೀಗ ಜೂ. 7ರಿಂದ ಪ್ರವಾಸಿ ತಾಣಗಳಲ್ಲಿ ಮಳೆ ಕಡಿಮೆಯಾದ ಕಾರಣದಿಂದ ಪ್ರವಾಸಿಗರಿಗೆ ಎಂದಿನಂತೆ ಪ್ರವೇಶಿಸಲು ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯದಿಂದ ಸಾರ್ವಜನಿಕರಿಗೆ ಅನುಮತಿ ನೀಡಲಾಗಿದೆ. ಬಂಡಾಜೆ ಜಲಪಾತ ವೀಕ್ಷಣೆಗೆ ನಿರ್ಬಂಧ ಮುಂದುವರಿದಿದೆ.

Exit mobile version