Site icon Suddi Belthangady

ಸ.ಹಿ.ಪ್ರಾ.ಶಾಲೆ ಇಂದಬೆಟ್ಟುವಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಇಂದಬೆಟ್ಟು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಕೂಡ ತಾವು ತಂದಂತಹ ಗಿಡಗಳನ್ನು ನೆಡುವುದರ ಮೂಲಕ ಪರಿಸರ ದಿನವನ್ನು ಸಂಭ್ರಮದಿಂದ ಆಚರಿಸಿ ಹರ್ಷಿಸಿದರು.

ಪೌಷ್ಟಿಕ ವನವನ್ನು ಕೂಡ ನಿರ್ಮಾಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಸ್‌.ಡಿ.ಎಂ.ಸಿ ಅಧ್ಯಕ್ಷ ಆನಂದ ಕೊಪ್ಪದ ಕೋಡಿ, ಉಪಾಧ್ಯಕ್ಷೆ ಹೇಮಲತಾ, ಸದಸ್ಯರಾದ ರಜಿತ, ಶ್ವೇತಾ, ಹೇಮಾವತಿ, ರೋಹಿಣಿ, ಉಮೇಶ್ ಕೊಪ್ಪದ ಕೋಡಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ದೀಪ ಎಲ್ಲರನ್ನು ಸ್ವಾಗತಿಸಿದರು. ಜಿಪಿಟಿ ಶಿಕ್ಷಕಿ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ಸುಜಾತ ಮತ್ತು ಹರಿಣಿ ಎಲ್ಲಾ ವಿದ್ಯಾರ್ಥಿಗಳಿಗೆ ಸಸಿ ನೆಡುವಲ್ಲಿ ಸಹಕರಿಸಿದರು.

Exit mobile version