ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ. 4ರಂದು ಭರತನಾಟ್ಯ ತರಗತಿಗಳು ಪ್ರಾರಂಭಗೊಂಡಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ಎಂ.ಆರ್. ದೀಪ ಬೆಳಗಿಸಿ ಭರತನಾಟ್ಯ ತರಗತಿಯನ್ನು ಉದ್ಘಾಟಿಸಿದರು. ಭರತನಾಟ್ಯ ಶಿಕ್ಷಕಿ ವಿದ್ಯಾ ಥೋಸರ್, ಸಹ ಶಿಕ್ಷಕಿಯರಾದ ಸೌಮ್ಯ ಪಿ., ರಮ್ಯಾ, ಕಾರುಣ್ಯ ಮೋಹಿನಿ, ಜಯಲಕ್ಷ್ಮಿ ಉಪಸ್ಥಿತರಿದ್ದರು.
ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಬೆಳ್ತಂಗಡಿ ಶಾಲೆಯಲ್ಲಿ ಭರತನಾಟ್ಯ ತರಗತಿಯ ಉದ್ಘಾಟನೆ
