Site icon Suddi Belthangady

ವಿಶ್ವ ಪರಿಸರ ದಿನ: ರಾಷ್ಟ್ರೀಯ ಕಾರ್ಟೂನ್ ಸ್ಪರ್ಧೆಯಲ್ಲಿ ಉಜಿರೆ ಶೈಲೇಶ್ ಕುಮಾರ್ ಗೆ ವಿಶೇಷ ಬಹುಮಾನ

ಉಜಿರೆ: ವಿಶ್ವ ಪರಿಸರ ದಿನದ ಅಂಗವಾಗಿ ಛತ್ತಿಸ್ ಗಢ ಪರಿಸರ ಸಂರಕ್ಷಣಾ ಮಂಡಳಿ ಮತ್ತು ಕಾರ್ಟೂನ್ ವಾಚ್ ಮ್ಯಾಗಜೀನ್ ಆಯೋಸಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಉಜಿರೆಯ ಶೈಲೇಶ್ ಕುಮಾರ್ ರವರಿಗೆ ವಿಶೇಷ ಬಹುಮಾನ ಲಭಿಸಿದೆ.

ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಎಂಬ ಧೇಯದಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಪ್ಲಾಸ್ಟಿಕ್ ಭೂತವನ್ನು ಓಡಿಸಿ ಭೂಮಿಯನ್ನು ರಕ್ಷಿಸುವ ಕುರಿತಾದ ಕಾರ್ಟೂನ್ ಚಿತ್ರಿಸಿದ್ದ ಶೈಲೇಶ್ ಕುಮಾರ್ ಗೆ ರಾಷ್ಟ್ರಮಟ್ಟದ ಬಹುಮಾನ ದೊರಕಿದೆ. ಉಜಿರೆ ಎಸ್. ಡಿ. ಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿರುವ ಶೈಲೇಶ್ ಹಲವಾರು ರಾಷ್ಟ್ರಮಟ್ಟದ ಬಹುಮಾನ ಪಡೆದಿದ್ದು, ಆ ಸಾಲಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ.

Exit mobile version