Site icon Suddi Belthangady

ಉಜಿರೆ: ಅನುಗ್ರಹ ಶಾಲಾ ಪ್ರಾರಂಭೋತ್ಸವ

ಉಜಿರೆ: 2025-26 ನೇ ಸಾಲಿನ ಅನುಗ್ರಹ ಶಾಲಾ ಪ್ರಾರಂಭೋತ್ಸವವು ಕಾಲಾ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಹಾ.ಅಚೆಲ್ ಲೋಬೊ, ಪ್ರಾಂಶುಪಾಲ ಹಾ. ವಿಜಯ್ ಲೋಬೋ ಮಕ್ಕಳ ಜೊತೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಕಾಲಾ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಪ್ರಾಂಶುಪಾಲರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಶಾಲೆಯಲ್ಲಿ ಮಕ್ಕಳು ಪಾಲಿಸಲೇಬೇಕಾದ ನಿಯಮಗಳ ಬಗ್ಗೆ ತಿಳಿಸಿ ಹೇಳಿದರು. ನಂತರ ಹೊಸ ಶಿಕ್ಷಕ ಶಿಕ್ಷಕಿಯರನ್ನು ಹಾಗೂ ಶಾಲೆಯ ವಿವಿಧ ತರಗತಿಗಳಿಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳನ್ನು ಸ್ವಾಗತಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಚಾಲಕ ಪಾ. ಬಿಬೇಲ್ ಲೋಬೊ ಮೌಲ್ಯಾಧಾರಿತ ಹಾಗೂ ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಳ್ಳದೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳುತ್ತಾ ಶಾಲಾ ಕಾರ್ಯ ಚಟುವಟಿಕೆಗಳಿಗೆ ಶುಭ ಕೋರಿದರು. ಮಕ್ಕಳಿಗೆ ಸಿಹಿ ಹಂಚಲಾಯಿತು.

ಸಹಶಿಕ್ಷಕ ರವಿಕುಮಾರ್ ಸ್ವಾಗತಿಸಿದರು. ಸಹ ಶಿಕ್ಷಕಿ ಐರಿನ್ ರೋಡ್ರಿಗನ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಅರ್ಪಿತ ವಂದಿಸಿದರು.

Exit mobile version