Site icon Suddi Belthangady

ವಿಮುಕ್ತಿಯಲ್ಲಿ ಮೆಹೆಂದಿ ಕಾರ್ಯಾಗಾರ

ಲಾಯಿಲ: ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ವತಿಯಿಂದ ಸಂಘದ ಮಹಿಳೆಯರ ಮಕ್ಕಳಿಗೆ ಮೆಹೆಂದಿ ವಿನ್ಯಾಸಗಳನ್ನು ಕಲಿಸುವ ಕಾರ್ಯಾಗಾರವನ್ನು ಲಾಯಿಲದ ಕಪುಚಿನ್ ಕೃಷಿಕ ಸೇವಾ ಕೇಂದ್ರದಲ್ಲಿ ಜೂ.1ರಂದು ಹಮ್ಮಿಕೊಳ್ಳಲಾಯಿತು.

ಬೆಳ್ತಂಗಡಿಯ ಜನನಿ ಪ್ರೊಫೆಶನಲ್ ಬ್ಯೂಟಿ ಪಾರ್ಲರಿನ ನೇತ್ರಾ ಇವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಸುಮಾರು 15 ಮಕ್ಕಳು ಮೆಹೆಂದಿ ಹಾಕುವ ಶೈಲಿ ಹಾಗೂ ವಿನ್ಯಾಸಗಳನ್ನು ಬಹಳ ಆಸಕ್ತಿಯಿಂದ ಕಲಿತು ಪ್ರಮಾಣ ಪತ್ರಗಳನ್ನು ಪಡೆದುಕೊಂಡರು. ಲವೀನಾ ಸ್ವಾಗತಿಸಿದರು. ರೋಹಿಣಿ ಧನ್ಯವಾದವಿತ್ತರು.

Exit mobile version