Site icon Suddi Belthangady

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ಸಾಧ್ಯತೆಗಳ ಹಾದಿಗಳು: ವೈಯುಕ್ತಿಕ ಕಲಿಕೆಯ ವಿನ್ಯಾಸ” ಕಾರ್ಯಾಗಾರ

ಉಜಿರೆ: ಮೇ. 29ರಂದು ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ “ಸಾಧ್ಯತೆಗಳ ಹಾದಿಗಳು: ವೈಯಕ್ತಿಕ ಕಲಿಕೆಯ ವಿನ್ಯಾಸ” ಕಾರ್ಯಾಗಾರ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ಅಕಾಡೆಮಿಯ ಸಾಫ್ಟ್‌ಸ್ಕಿಲ್ ಡೆವಲಪ್‌ಮೆಂಟ್ ತರಬೇತುದಾರ ಡಾ.ಸಿಜು ಥಾಮಸ್ ವಿಷಯದ ಕುರಿತಾಗಿ ಚಟುವಟಿಕೆಗಳೊಂದಿಗೆ ಮಾಹಿತಿ ಹಂಚಿಕೊಂಡರು.

ಕಾರ್ಯಾಗಾರದ ಅಧ್ಯಕ್ಷತೆ ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯ್ಕ್ ಕೆ.ಜಿ. ವಹಿಸಿ, ಸ್ವಾಗತಿಸಿದರು. ಶಿಕ್ಷಕಿ ಸವಿತಾ ವೇದಪ್ರಕಾಶ್ ನಿರೂಪಿಸಿದರು. ಶಿಕ್ಷಕಿ ಶಾಂಟಿ ಜಾರ್ಜ್ ವಂದಿಸಿದರು.

Exit mobile version