ಇಳಂತಿಲ: ಅಂಡೆತಡ್ಕದಲ್ಲಿ ಮೇ.26ರಂದು ಸುರಿದ ಧಾರಾಕಾರ ಮಳೆಯಿಂದಾಗಿ ಯಾಕೂಬು ಎಂಬವರ ಮನೆಯ ಆವರಣದ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಮನೆಯ ಪಂಚಾಗದ ಅಡಿಯವರೆಗೂ ಕುಸಿತಗೊಂಡಿದ್ದು ಮನೆಯೂ ಕುಸಿದು ಬೀಳುವ ಅಪಾಯದಲ್ಲಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮನೆಯವರನ್ನು ಬೇರೆ ಕಡೆಗೆ ಹಸ್ತಾಂತರ ಮಾಡುವಂತೆ ಸೂಚಿಸಿದ್ದಾರೆ.