ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಮೈಲುತುತ್ತು ವಿತರಣೆ ಮಾಡುತ್ತಿದ್ದು ಅಡಿಕೆ ಬೆಳೆಗಾರರು ಇದರ ಪ್ರಯೋಜನವನ್ನು ಪಡೆಯಬೇಕೆಂದು ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ತಿಳಿಸಿರುತ್ತಾರೆ.
ಸಬ್ಸಿಡಿ ಬೆಲೆ ಪ್ರತಿ ಕಿಲೋ ರೂ. 280 ಆಗಿದ್ದು ಬೆಳೆಗಾರರಿಗೆ ಈ ಬೆಲೆಯಲ್ಲಿ ಮೈಲ್ ತುತ್ತು ನೀಡುತ್ತಿದ್ದೇವೆ. ಕಳೆದ ಬಾರಿ ಕೊಳೆರೋಗದ ಬಾಧೆಯಿಂದ ಅಡಿಕೆ ಬೆಳಗಾರರು ತುಂಬಾ ನಷ್ಟಗಳನ್ನು ಅನುಭವಿಸಿದ್ದು, ಸಂಘದಿಂದ ಕಡಿಮೆ ಬೆಲೆಯಲ್ಲಿ ಮೈಲ್ ತುತ್ತು ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು. ಜೊತೆಗೆ ರೈತರಿಗೆ ರಸಗೊಬ್ಬರ ಹಾಗೂ ಕೀಟನಾಶಕಗಳ ಖರೀದಿಗೆ ವಿಶೇಷವಾಗಿ ಪ್ರತಿ ಎಕ್ರೆಗೆ ರೂ. 20 ಸಾವಿರದಂತೆ ಓವರ್ ಡ್ರಾಫ್ಟ್, (ಓಡಿ) ಸಾಲ ನೀಡಿ ರೈತರಿಗೆ ಸದಾ ಸ್ಪಂದನೆ ನೀಡಲಾಗುವುದು. ಈ ಯೋಜನೆ ರೈತರಿಗೆ ತುಂಬಾ ಸಹಾಯವಾಗಲಿದೆ ಎಂದರು.
ಮೈಲ್ ತುತ್ತು ವಿತರಣೆ ಮಾಡುತ್ತಿದ್ದು, ಶೇಖರ ಆಚಾರ್ಯ ಪಿಲ್ಯ ಹಾಗೂ ಧರ್ಣಪ್ಪ ಪೂಜಾರಿ ಬಡಗಕಾರಂದೂರು ಇವರಿಗೆ ನೀಡಲಾಗಿದೆ. ಸಂಘದ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಸಿಇಓ ಮೀರಾ, ನಿರ್ದೇಶಕರಾದ ದಿನೇಶ್ ಪಿ.ಕೆ., ದೇಜಪ್ಪ ಪೂಜಾರಿ, ದೇವಿಪ್ರಸಾದ್ ಶೆಟ್ಟಿ ಹಾಗೂ ಕೃಷಿಕರು ಉಪಸ್ಥಿತರಿದ್ದರು.