Site icon Suddi Belthangady

ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ – ಬೆಳ್ತಂಗಡಿ ಘಟಕ ತೃತೀಯ

ಬೆಳ್ತಂಗಡಿ: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಪುತ್ತೂರು ಘಟಕದ ಆತಿಥ್ಯದಲ್ಲಿ ಪುತ್ತೂರಿನಲ್ಲಿ ಮೇ. 25ರಂದು ನಡೆದ ಡೆನ್ನಾನ ಡೆನ್ನಾನ 2025 ಅಂತರ ಘಟಕ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ತಂಗಡಿ ಘಟಕ ಭಾಗವಹಿಸಿದ್ದು, ಅತ್ಯುತ್ತಮ ಪ್ರದರ್ಶನದೊಂದಿಗೆ ನೋಡುಗರ ಹಾಗೂ ತೀರ್ಪುಗಾರರ ಮನ ಗೆದ್ದು ತೃತೀಯ ಸ್ಥಾನವನ್ನು ಪಡೆದಿರುತ್ತದೆ ಹಾಗೂ ಅತ್ಯುತ್ತಮ ಸಂದೇಶವನ್ನು ಸಾರುವ ಕಥೆ ಈ ಪ್ರಶಸ್ತಿಯನ್ನು ಕೂಡ ಬೆಳ್ತಂಗಡಿ ಘಟಕ ಪಡೆದಿರುತ್ತದೆ.

ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ನೇತೃತ್ವದಲ್ಲಿ ಭಾಗವಹಿಸಿದ ಈ ತಂಡವು ನಿರ್ದೇಶಕ ಸ್ಮಿತೇಶ್ ಎಸ್. ಬಾರ್ಯ ಹಾಗೂ ಅನೀಶ್ ಅಮೀನ್ ವೇಣೂರು ಇವರ ಅತ್ಯುತ್ತಮ ಕಥೆ ಹಾಗೂ ನಿರ್ದೇಶನದೊಂದಿಗೆ ಪ್ರಸ್ತುತಿಗೊಂಡಿತು. ತಂಡದಲ್ಲಿ ಒಟ್ಟು 40 ಜನ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

ಘಟಕದ ಮಾಜಿ ಅಧ್ಯಕ್ಷ ಪ್ರಶಾಂತ್ ಮಚ್ಚಿನ, ರಾಕೇಶ್ ಮೂಡುಕೋಡಿ, ಎಂ ಕೆ ಪ್ರಸಾದ್, ಅಶ್ವತ್ ಕುಮಾರ್, ಸದಾಶಿವ ಪೂಜಾರಿ ಊರ, ಗೌರವ ಸಲಹೆಗಾರರಾದ ರಮಾನಂದ ಸಾಲಿಯಾನ್ ಮುಂಡೂರು, ಕಾರ್ಯದರ್ಶಿ ಮಧುರ ರಾಘವ, ಕೋಶಾಧಿಕಾರಿ ನಾಗೇಶ್ ಆದೇಲು, ಮಹಿಳಾ ಸಂಚಾಲನ ಸಮಿತಿ ಸಂಚಾಲಕಿ ಲೀಲಾವತಿ ಪಣಕಜೆ ಹಾಗು ಘಟಕದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Exit mobile version