ಅಂಡಿಂಜೆ: ಬಿ. ಆರ್. ಜಿ.ಕಾಂಪ್ಲೆಕ್ಸ್ ನಲ್ಲಿ ಭಟ್ಸ್ ಮೆಡಿಕಲ್ ನ ಉದ್ಘಾಟನೆ ಮೇ.25ರಂದು ನೆರವೇರಿತು. ದಕ್ಷಿಣ ಕನ್ನಡ ಜಿಲ್ಲಾ ಮೆಡಿಕಲ್ ಸಂಘಗಳ ನಿಕಟಪೂರ್ವ ಅಧ್ಯಕ್ಷ ಸುಜಿತ್ ಭಿಡೆ ಮುಂಡಾಜೆ ಉದ್ಘಾಟಿಸಿದರು.
ಸರೋಜ ಗೋರೆ, ಪ್ರಭಾಕರ ಮರಾಠೆ ಮೂಡಬಿದ್ರೆ, ಬಿ. ಆರ್. ಜಿ. ರೆಸಿಡೆನ್ಸ್ ಮಾಲಕ ರಾಜೇಶ್ ಪೂಜಾರಿ, ಶಿವಪ್ರಸಾದ್ ವೇಣೂರು, ರಮೇಶ್ ಭಟ್ ಪಿಲಿಯೂರು, ಭಾಸ್ಕರ ಗೋರೆ, ಸುದೀಪ ಪಟವರ್ಧನ್ ವೇಣೂರು, ಬಾಲಕೃಷ್ಣ ಸಹಸ್ರಬುದ್ಧೆ, ಬಂಧು ಮಿತ್ರರು ಮತ್ತು ಊರವರು ಉಪಸ್ಥಿತರಿದ್ದು, ಹೊಸ ಉದ್ಯಮಕ್ಕೆ ಶುಭ ಹಾರೈಸಿದರು.
ಎಲ್ಲಾ ರೀತಿಯ ಔಷಧಗಳು ಲಭ್ಯವಿದ್ದು ಜನರಿಗೆ ಉತ್ತಮ ಗುಣಮಟ್ಟದ ಔಷಧಿಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಪೂರೈಸಲಾಗುವುದು ಎಂದು ಸಂಸ್ಥೆಯ ಮಾಲಕ ಸುಮಂತ್ ಗೋರೆ ಪಿ. ತಿಳಿಸಿದರು.