ಉಜಿರೆ: ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ಪರಿಷತ್ತಿನ ಮೈಸೂರು/ಮಂಗಳೂರು ವಲಯ ಸದಸ್ಯರಾಗಿ ಉಜಿರೆ ಇಂಜಿನಿಯರ್ ಜಗದೀಶ್ ಪ್ರಸಾದ್ ಆಯ್ಕೆಯಾಗಿದ್ದಾರೆ.
ಇವರು ಅಖಿಲ ಭಾರತ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ರ್ಸ್ ಸಂಘ ಇದರ ಬೆಳ್ತಂಗಡಿ ತಾಲೂಕು ಘಟಕದ ಛೇರ್ಮನ್, ರೋಟರಿ ಕ್ಲಬ್ ಬೆಳ್ತಂಗಡಿ ಇದರ ಮಾಜಿ ಅಧ್ಯಕ್ಷರು.,ಉಜಿರೆ ರತ್ನಾಮಾನಸದ ಹಿರಿಯ ವಿದ್ಯಾರ್ಥಿ, ಇಂಡಿಯನ್ ಇನ್ಸ್ಟಿಟ್ಯೂಟ್ ಓಫ್ ಇಂಜಿನಿಯರ್ಸ್, (IEI) ಇಂಡಿಯನ್ ವ್ಯಾಲ್ಯೂವರ್ಸ್ ಅಸೋಸಿಯೇಷನ್ಕ ರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಆಕ್ಟ್ ಕಂನ್ಸೋರ್ಸಿಯಂ ನ ಫೌಂಡರ್ ಮೆಂಬರ್, ಆದಾಯ ಇಲಾಖೆಯ ನೋಂದಾಯಿತ ವ್ಯಾಲ್ಯೂವರ್, ಚಾರ್ಟೆಡ್ ಇಂಜಿನಿಯರ್, ಕೃಷಿಕ- ಜೆ.ಪಿ. ಫಾರ್ಮ್ ಮುಂಡಾಜೆ, ಶ್ರೀ ಶಾರದಾ ಸೇವಾ ಟ್ರಸ್ಟ್, ಉಜಿರೆ ಇದರ ಟ್ರಸ್ಟಿ, ಉಡುಪಿ ಶ್ರೀ ಸುರಕ್ಷಾ ಗೋ ಸೇವಾ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಮೊದಲಾದ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದಾರೆ.