ಬೆಳ್ತಂಗಡಿ: ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ಉಡುಪಿ ಪ್ರಧಾನ ಕಚೇರಿಯ ಅಂಗ ಸಂಸ್ಥೆಯಾದ ಬೆಳ್ತಂಗಡಿ ಶಾಖೆಯ ವತಿಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕಿನ ಸಿಬ್ಬಂದಿಗಳಿಗೆ ಗೌರವ ಪುರಸ್ಕಾರ ಸಮಾರಂಭವು ಮೇ 20ರಂದು ಬೆಳ್ತಂಗಡಿ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್, ಸಂತೆಕಟ್ಟೆ ಕಚೇರಿಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾರತೀಯ ಜೀವ ನಿಗಮ ಬೆಳ್ತಂಗಡಿ ಶಾಖೆಯ ಪ್ರಬಂಧಕ ಕೆ. ಪ್ರಕಾಶ್ ಭಾಗವಹಿಸಿ ವಿದ್ಯೆ ಕಲಿಸಿದ ಗುರುವಿಗೆ ಗೌರವಿಸುವ ಈ ಪುಣ್ಯದ ಕಾರ್ಯ ಸಮಾಜಕ್ಕೊಂದು ಮಾದರಿಯಾಗಿದೆ. ಅಷ್ಟು ಮಾತ್ರವಲ್ಲದೆ ಈ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಗುರುತಿಸಿದಾಗ ಅವರ ಕಾರ್ಯವೈಕರಿಯಲ್ಲಿ ಇನ್ನಷ್ಟು ಬೆಳವಣಿಗೆ ಸಾಧ್ಯ ಅಂತಹ ಕಾರ್ಯವನ್ನು ಕೈಗೊಂಡಿರುವ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಧರಣೇಂದ್ರ ಕೆ. ಇವರ ಚಿಂತನ ವಿಚಾರ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘನೀಯ ಮಾತುಗಳ ನಾಡಿದರು. ಬ್ಯಾಂಕಿನ ನಿರ್ದೇಶಕ ಧರಣೇಂದ್ರ ಕೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಉಜಿರೆ ಶ್ರೀ ಧ. ಮ. ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ. ಬಿ.ಎ.ಕುಮಾರ್ ಹೆಗ್ಡೆ, ನಿವೃತ್ತ ಶಿಕ್ಷಕ ಪಂಚಾಕ್ಷರಪ್ಪ ಬೆಳ್ತಂಗಡಿ, ಸೀತಾರಾಮ ಗೌಡ ಅರಸಿನಮಕ್ಕಿ, ಕೃಷ್ಣಪ್ಪ ನಾಯ್ಕ ಕೊಕ್ರಾಡಿ, ವಿದ್ಯಾ ಕುಮಾರಿ ಪಿ ಗಂಡಿಬಾಗಿಲು, ಲಿಯೋ ನೋರನ್ಹ ಮಡಂತ್ಯಾರು ಇರವರನ್ನು ಹಾಗೂ ಬ್ಯಾಂಕಿನ ಪ್ರಸ್ತುತ ಪ್ರಬಂಧಕ ಚೇತನ್ ಕುಮಾರ್ ಕೆ.ಯಂ. ಸಿಬ್ಬಂದಿಗಳಾದ ಗಣೇಶ್, ಅನಿಲ್ ಕುಮಾರ್ ಕೆ.ಜಿ., ಮಧುಕರ್ ಶೆಟ್ಟಿ, ಸಂಧ್ಯಾ, ಸ್ವಾತಿ ಪೈ ಎನ್. ಇವರನ್ನು ಗೌರವಿಸಲಾಯಿತು.
ನಿವೃತ್ತ ಪರವಾಗಿ ನಿವೃತ್ತ ಪ್ರಾಂಶುಪಾಲ ಡಾ. ಬಿ.ಎ ಕುಮಾರ್ ಹೆಗ್ಡೆರವರು ನಿವೃತ್ತ ಶಿಕ್ಷಕರಿಗೆ ಗೌರವಿಸುವುದು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಶಿಕ್ಷಕರು ಇಡುವಂತಹ ಹೂಡಿಕೆಗೆ ಭದ್ರತೆ ಮತ್ತು ವಿಶ್ವಾಸಕ್ಕೆ ಪಾತ್ರವಾದ ಸಂಸ್ಥೆಯಾಗಿದೆ. ಬ್ಯಾಂಕ್ ಇನ್ನಷ್ಟು ಜನರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಲಿ, ನೂತನ ನಿರ್ದೇಶಕರಾಗಿ ಆಯ್ಕೆಯಾದ ಧರಣೇಂದ್ರ ಕೆ. ಇವರು ಮಾಡುತ್ತಿರುವ ಕಾರ್ಯ ಪ್ರತಿ ಬ್ಯಾಂಕಿಗೂ ಒಂದು ಇಂತಹ ಕಾರ್ಯವನ್ನು ಇನ್ನಷ್ಟು ತಮ್ಮ ಅವಧಿಯಲ್ಲಿ ಮಾಡಿ ಸಂಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಸಾಲ ವಸೂಲಾತಿ ಅಧಿಕಾರಿ ನವೀನ್ ಶೆಟ್ಟಿ ಕಾರ್ಕಳ, ಶಾಖ ಪ್ರಬಂಧಕ ಚೇತನ್ ಕುಮಾರ್ ಕೆ.ಎಮ್. ಉಪಸ್ಥಿತರಿದ್ದರು.
ಬ್ಯಾಂಕ್‌ನ ಸಾಧನೆ: ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಒಟ್ಟು 21780 ಸದಸ್ಯತನ ಹೊಂದಿದ್ದು, ಬೆಳ್ತಂಗಡಿ ಶಾಖೆಯು 1100 ಸದಸ್ಯತನ ಹೊಂದಿದೆ. ಶಾಖೆಯ ಠೇವಣಿ ರೂ. 36 ಕೋಟಿ, ಶಾಖೆಯ ಸಾಲ ಪಾವತಿ ರೂ.12ಕೋಟಿ ಇದ್ದು, ಶೇ.100 ವಸೂಲಾತಿ ಇದೆ. ಒಟ್ಟು 14 ಶಾಖೆಗಳಿದ್ದು, 110ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ರೂ. 586ಕೋಟಿ ಬ್ಯಾಂಕಿನ ಠೇವಣಿ ಹೊಂದಿದ್ದು, ರೂ.454 ಕೋಟಿ ಬ್ಯಾಂಕಿನ ಸಾಲ ಪಾವತಿಗಳಿವೆ ಹಾಗೂ ಒಟ್ಟು ವ್ಯವಹಾರ ರೂ.1050 ಕೋಟಿ ಇದೆ. ಎಂದು ಧರಣೇಂದ್ರ ಕೆ. ತಿಳಿಸಿದರು.
ನಿರ್ದೇಶಕ ಧರಣೇಂದ್ರ ಕೆ. ನಿರ್ವಹಣೆಯೊಂದಿಗೆ, ಸಿಬ್ಬಂದಿ ಸಂಧ್ಯಾ ಮತ್ತು ಬಳಗ ಪ್ರಾರ್ಥಿಸಿದರು. ನಿವೃತ್ತ ಪ್ರಬಂಧಕ ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿ, ವಂದಿಸಿದರು.