ಪನೆಜಾಲು: ಗುರುವಾಯನಕೆರೆ – ಉಪ್ಪಿನಂಗಡಿ ಮುಖ್ಯ ರಸ್ತೆಯ ಪನೆಜಾಲು ಎಂಬಲ್ಲಿ ನೂತನವಾಗಿ ನಿರ್ಮಿಸಿದ ರೇಗೊ ಕಾಂಪ್ಲೆಕ್ಸ್ ಮೇ. 22ರಂದು ಉದ್ಘಾಟನೆಗೊಂಡಿತು. ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ಧರ್ಮಗುರು ಫಾ. ವಾಲ್ಟರ್ ಡಿಮೆಲ್ಲೊ ಸಂಸ್ಥೆಯ ಆಶೀರ್ವಚನ ನೆರವೇರಿಸಿದರು.
ಬೆಳ್ತಂಗಡಿ ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ. ಕ್ಲಿಫರ್ಡ್ ಪಿಂಟೊ ಸಹಕರಿಸಿದರು. ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಕುವೆಟ್ಟು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪೂವಪ್ಪ ಭಂಡಾರಿ, ಕ್ಯಾಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ನಿರ್ದೇಶಕ ಜೇಮ್ಸ್ ಡಿ ಸೋಜಾ, ಉಧ್ಯಕ್ಷ ಡೇನಿಸ್ ಸಿಕ್ವೆರಾ, ಪ್ರಸಾದ್ ಪಿಂಟೊ, ಅಲ್ಫೋನ್ಸ್ ರೋಡ್ರಿಗಸ್, ತೊಮಸ್ ಆರ್ ನೋರೋನ್ಹ, ಸಿ ಇ ಓ ಐವನ್ ಗೊನ್ಸಲ್ವಿಸ್, ಉಜಿರೆ ರಬ್ಬರ್ ಮಾರಾಟ ಮತ್ತು ಸಂಸ್ಕಾರಣ ಸಹಕಾರ ಸಂಘದ ಸಿ ಇ ಓ ರಾಜು ಶೆಟ್ಟಿ, ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬಾರ್ಟ್ ಪಿಂಟೊ, ಹಿರಿಯ ವಕೀಲ ಅಲೋಸಿಯಸ್ ಲೋಬೊ, ಪ್ರೇರಣಾ ಸೌಹಾರ್ಧ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಐರಿನ್ ಡಿ ಸೋಜ, ಟಿವಿಎಸ್ ಮೋಟರ್ಸ್ ಮಾಲಕ ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ, ಹಿರಿಯರಾದ ಅತ್ತೂಸ್ ವೇಗಸ್, ಜ್ಯೋತಿ ಎಲೆಕ್ಟ್ರಿಕಲ್ ಫಿಲಿಪ್ಸ್ ವೇಗಸ್, ಶಿಕ್ಷಕ ಪಿಲಿಪ್ ರೋನಾಲ್ಡ್ ಡಿಮೆಲ್ಲೊ, ಶಿಕ್ಷಕಿ ಹಿಲ್ಡ ರೋಡ್ರಿಗಸ್, ಎಲ್ ಐ ಸಿ ಇನ್ಶೂರೆನ್ಸ್ ಅಡ್ವೈಜರ್ ವಿನ್ಸೆoಟ್ ಡಿಸೋಜ, ನ್ಯಾಷನಲ್ ಇನ್ಶೂರೆನ್ಸ್ ಅಭಿವೃದ್ಧಿ ಅಧಿಕಾರಿ ಅರ್ವಿನ್ ಡಿಸೋಜಾ, ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ವಿಲ್ಸನ್ ಗೊನ್ಸಲ್ವಿಸ್, ಕಾರ್ಮಿಕರಿಗೆ ಸನ್ಮಾನ ಸಂತೋಷ್, ರಾಘವ, ಮುಖೇಶ್, ವಿವೇಕ್ ಇಂಜಿನಿಯರ್ ನಾಗೇಶ್ ಇವರನ್ನು ಗೌರವಿಸಲಾಯಿತು.
ಇಲ್ಲಿ ಉದ್ಯಮ ನಡೆಸಲು ಸುಸಜ್ಜಿತ 4ಮನೆಗಳು, ವಾಹನ ಶೋ ರೂಮ್ ಮಳಿಗೆ, ಹಾರ್ಡ್ ವೇರ್ ಮಳಿಗೆ, ಪೈಂಟ್, ಟೈಲ್ಸ್ ಗ್ರಾನೈಟ್, ಇನ್ನಿತರ ಉದ್ಯಮಕ್ಕೆ ವಿಶಾಲ ವಾದ ಪಾರ್ಕಿಂಗ್ ಸೌಲಭ್ಯ ಹೊಂದಿದೆ ಎಂದು ಮಾಲಕ ಫೇಲಿಕ್ಸ್ ರೇಗೊ ತಿಳಿಸಿದರು. ಮಾಲಕರಾದ ಪೌಲಿನ್ ರೇಗೊ, ಫೇಲಿಕ್ಸ್ ರೇಗೊ, ಪುತ್ರಿ ರಿಯೋನ, ಅಳಿಯ ಹರ್ಷಿತ್, ಪುತ್ರ ರಿತೇಶ್, ಸೊಸೆ ರೈನಾ, ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲಾನ್ಸಿ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಗುರುವಾಯನಕೆರೆ ಎಕ್ಷೆಲ್ ಕಾಲೇಜಿನ ಪ್ರಾದ್ಯಪಾಕಿ ರೈನಾ ವಂದಿಸಿದರು.