Site icon Suddi Belthangady

ಮಲೆಬೆಟ್ಟು ಬದಿನಡೆ ಶ್ರೀ ವನದುರ್ಗಾ ದೇವಿಯ ಸನ್ನಿಧಿಯಲ್ಲಿ ಸಿಂಧೂರ ವಿಜಯೋತ್ಸವ ಪ್ರಯುಕ್ತ ವಿಶೇಷ ಪೂಜೆ

ಮಲೆಬೆಟ್ಟು: ಬದಿನಡೆ ಶ್ರೀ ವನದುರ್ಗಾ ದೇವಿಯ ಸನ್ನಿಧಿಯಲ್ಲಿ ಪಾಕಿಸ್ತಾನ ಯುದ್ಧದ ‘ಸಿಂಧೂರ’ ವಿಜಯೋತ್ಸವ ಪ್ರಯುಕ್ತ ವಿಶೇಷ ಪೂಜೆ ಮೇ. 21ರಂದು ನಡೆಯಿತು. ಭಾರತ- ಪಾಕಿಸ್ತಾನ ಯುದ್ಧದ ‘ಸಿಂಧೂರ’ ವಿಜಯೋತ್ಸವ ಪ್ರಯುಕ್ತ, ಹಾಗೆಯೇ ಮುಂದೆಯೂ ನಮ್ಮ ದೇಶದ ಸೈನಿಕರಿಗೆ ಶಕ್ತಿ ಸಾಮರ್ಥ್ಯವನ್ನು, ಶ್ರೀ ದೇವಿಯು ನೀಡಲಿ ಎನ್ನುವ ಪ್ರಾರ್ಥನೆಗಾಗಿ ಶ್ರೀ ಕ್ಷೇತ್ರ ಮಲೆಬೆಟ್ಟು ಬದಿನಡೆ ಶ್ರೀ ವನದುರ್ಗಾ ದೇವಿಯ ಸನ್ನಿಧಿಯಲ್ಲಿ ವಿಶೇಷವಾಗಿ ಶ್ರೀ ದೇವಿಗೆ ರಂಗಪೂಜೆ, ಹಾಗು ಭಜನಾ ಸೇವೆ ನಡೆಯಿತು. ಭಕ್ತಾಧಿಗಳಾದ ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ್ದರು.

Exit mobile version