Site icon Suddi Belthangady

ಯೂನಿಯನ್ ಬ್ಯಾಂಕ್ ಮದ್ದಡ್ಕ ಶಾಖೆಯಿಂದ ಬೆಂಗಳೂರಿಗೆ ವರ್ಗಾವಣೆಗೊಂಡ ಸುಧೀರ್ ನಾಯ್ಕ್ ರವರಿಗೆ ಗೌರವಾರ್ಪಣೆ

ಕುವೆಟ್ಟು: ಯೂನಿಯನ್ ಬ್ಯಾಂಕ್ ಮದ್ದಡ್ಕ ಶಾಖೆಯಲ್ಲಿ ಕಳೆದ 2 ವರ್ಷ ಅವಧಿಯಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ಬೆಂಗಳೂರಿಗೆ ವರ್ಗಾವಣೆಗೊಂಡ ಸುಧೀರ್ ನಾಯ್ಕ್ ಅವರನ್ನು ಮದ್ದಡ್ಕ ಶಾಖೆಯ ಸಿಬ್ಬಂದಿ ವರ್ಗ ಹಾಗೂ ಊರ ಹಿತೈಷಿಗಳಿಂದ ಗೌರವಾರ್ಪಣೆ ಕಾರ್ಯಕ್ರಮ ಮೇ. 20ರoದು ಜರಗಿತು.

ಗೌರವಾರ್ಪಣೆಯನ್ನು ಸ್ವೀಕರಿಸಿದ ಸುಧೀರ್ ನಾಯ್ಕ್ ಮಾತನಾಡಿ ನನ್ನ 2 ವರ್ಷದ ಅವಧಿಯಲ್ಲಿ ಮದ್ದಡ್ಕ ಶಾಖೆಯಲ್ಲಿ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸಿದ ಗ್ರಾಹಕರಿಗೆ ಹಾಗೂ ಉತ್ತಮ ಸೇವೆಯನ್ನು ನೀಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಶಾಖೆಯ ಮೆನೇಜರ್ ರಾಧಾ ಕೆ.ಕೆ., ಸಿಬ್ಬಂದಿಗಳಾದ ರಾಧಾಕೃಷ್ಣ ಭಟ್, ಶರಲ್ ಪಿಂಟೋ, ರೇವತಿ, ಸುಕೇಶ್, ಚೇತನ್, ಧರ್ಮಶ್ರೀ ಸಂಕೀರ್ಣದ ಮಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ, ವಿವೇಕಾನಂದ ಶೆಣೈ, ಗಣೇಶ್ ಶೆಟ್ಟಿ ಅರ್ಕಜೆ, ಅಬ್ಬೋನ್ ಮದ್ದಡ್ಕ, ಶೇಖರ್ ಶೆಟ್ಟಿ, ಯೋಗಿಶ್ ಶೆಟ್ಟಿ ಅನಿಲ, ವಿಜಯ ಸಾಲ್ಯಾನ್, ಉಮೇಶ್ ಮದ್ದಡ್ಕ ಮತ್ತಿತರರು ಉಪಸ್ಥಿತರಿದ್ದರು.

Exit mobile version