ಧರ್ಮಸ್ಥಳ: ಪಂಜಾಬ್ ನಲ್ಲಿ ಧರ್ಮಸ್ಥಳ ಬೋಳಿಯಾರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂದೇವಿ ದಂಪತಿಗಳ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದ ಆಕಾಂಕ್ಷ ಎಸ್. ನಾಯರ್(22ವ) ಸಾವು ಪ್ರಕರಣ ಮೇ. 21ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ 9ಗಂಟೆ ಸುಮಾರಿಗೆ ಆಂಬುಲೆನ್ಸ್ ಮೂಲಕ ಧರ್ಮಸ್ಥಳದ ಬೋಳಿಯರ್ ಗೆ ಮೃತದೇಹದ ರವಾನೆ ಮಾಡಲಾಯಿತು.
ಭಾರೀ ಮಳೆಯ ಹಿನ್ನಲೆ ಮನೆಗೆ ಸಾಗುವ ದಾರಿಯಲ್ಲಿ ಮಣ್ಣಿನಲ್ಲಿ ಹೂತ ಆ್ಯಂಬುಲೆನ್ಸ್ ನ್ನು ಮಣ್ಣಿನಿಂದ ಹೊರತೆಗೆದ ಸ್ಥಳೀಯರು. ಮನೆಗೆ ತಲುಪಿದ ಅಕಾಂಕ್ಷ ಮೃತದೇಹ ಕಂಡು ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ. ಬೋಳಿಯಾರು ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆದು 11 ಗಂಟೆಗೆ ಅಂತ್ಯಸಂಸ್ಕಾರ ವ್ಯವಸ್ಥೆ ಮಾಡಲಾಗಿದೆ.