Site icon Suddi Belthangady

ಆಕಾಂಕ್ಷ ನಿಗೂಢ ಸಾವು-ಸಬ್ ಇನ್ಸ್ ಪೆಕ್ಟರ್ ಜಸ್ವಿರ್ ಸಿಂಗ್ ಸಸ್ಪೆಂಡ್?-ತನಿಖೆಗೆ ಐವರು ಉನ್ನತ ಅಧಿಕಾರಿಗಳ ತಂಡ ರಚನೆ

ಬೆಳ್ತಂಗಡಿ: ಧರ್ಮಸ್ಥಳದ ಬೊಳಿಯಾರ್ ನಿವಾಸಿ, ಏರೋಸ್ಪೇಸ್ ಉದ್ಯೋಗಿ‌ ಆಕಾಂಕ್ಷ ಪಂಜಾಬ್ ನ ಜಲಂದರ್ ನಲ್ಲಿರುವ ಕಾಲೇಜಿನಲ್ಲಿ ಅನುಮಾನಾಸ್ಪದವಾಗಿ ಮೇ. 18ರಂದು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಪಗ್ವಾಡ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜಸ್ವಿರ್ ಸಿಂಗ್ ಎಂಬಾತನನ್ನು ಸಸ್ಪೆಂಡ್ ಮಾಡಿರುವ ಬಗ್ಗೆ ಕುಟುಂಬ ಮೂಲಗಳಿಂದ ಮಾಹಿತಿ ದೊರೆತಿದೆ.

ಪೊಲೀಸರು ಆಕಾಂಕ್ಷ ಕುಟುಂಬದ ದೂರನ್ನು ಪಗ್ವಾಡ ಠಾಣೆಯಲ್ಲಿ ಸ್ವೀಕರಿಸದೇ, ಪೊಲೀಸರೇ ಬೇರೆ ದೂರು ದಾಖಲಿಸಿಕೊಂಡು ವಂಚಿಸಲು ಯತ್ನಿಸಿದ್ದರು. ಈ ಹಿನ್ನಲೆಯಲ್ಲಿ ಆಕಾಂಕ್ಷ ಕುಟುಂಬ ಮೇಲಾಧಿಕಾರಿಗಳಿಗೆ ದೂರು ನೀಡಿತ್ತು. ಇದೀಗ ಪ್ರಕರಣದ ಆರೋಪಿ ಬಿಜಿಲ್ ಮ್ಯಾಥ್ಯೂರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲು ಎಸ್. ಪಿ ಸೇರಿದಂತೆ ಐವರು ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ.

Exit mobile version