Site icon Suddi Belthangady

ಅರಸಿನಮಕ್ಕಿ ಶಿಬರಾಜೆ ರಸ್ತೆಯ ತಿರುವಿನಲ್ಲಿ ತಡ ರಾತ್ರಿ ಸುರಿದ ಭಾರೀ ಮಳೆಗೆ ಕಂದಕ ಸೃಷ್ಟಿ: ಅರಸಿನಮಕ್ಕಿ ಶಿಶಿಲ ಶೌರ್ಯ ಘಟಕದಿಂದ ತಾತ್ಕಾಲಿಕ ತಡೆ

ಕಳೆಂಜ: ಅರಸಿನಮಕ್ಕಿ ರಸ್ತೆಯ ಶಿಬರಾಜೆ ಎಂಬಲ್ಲಿ ಮೇ. 18ರಂದು ಸುರಿದ ಭಾರೀ ಮಳೆಗೆ ರಸ್ತೆಯ ತಿರುವಿನಲ್ಲಿ ಅಪಾಯಕಾರಿ ಕಂದಕವೊಂದು ನಿರ್ಮಾಣವಾಗಿತ್ತು.

ಅರಸಿನಮಕ್ಕಿ ಶಿಶಿಲ ಶೌರ್ಯ ಘಟಕದ ತುರ್ತು ಸ್ಪಂದನೆ ತಂಡದಿಂದ ಯೋಗೀಶ್ ಶಿಬರಾಜೆ, ಅವಿನಾಶ್ ಭಿಡೆ, ರಮೇಶ ಬೈರಕಟ್ಟ ಅಪಾಯಗಳನ್ನು ತಪ್ಪಿಸಲು‌ ಸ್ವಯಂ ಸೇವಕರು ಕಲ್ಲುಗಳ ತಾತ್ಕಾಲಿಕ ತಡೆಯನ್ನು ಮಾಡಿದರು.

Exit mobile version