ಶಿಶಿಲ: ಶ್ರೀ ಶಿಶಿಲೇಶ್ವರ ದೇವಸ್ಥಾನ ಶಿಶಿಲದಲ್ಲಿ ಮೇ. 13ರಿಂದ ಪ್ರಾರಂಭಗೊಂಡು ಮೇ. 21ರವರೆಗೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಜರುಗಲಿದೆ. ಮೇ. 17ರಂದು ಪೂರ್ವಾಹ್ನ ಅಂಗಣೋತ್ಸವ “ದೇವರ ದರ್ಶನ ಬಲಿ”, ಬಟ್ಟಲು ಕಾಣಿಕೆ ನಡೆಯಿತು.
ಶ್ರೀ ಶ್ರೀನಿವಾಸ ಮೂಡೆತ್ತಾಯ ಮತ್ತು ಉತ್ಸವ ಸಮಿತಿ ಸದಸ್ಯರು, ಆಡಳಿತಾಧಿಕಾರಿ ದಿನೇಶ್ ಎಂ., ಅರ್ಚಕರು, ಅಭಿವೃದ್ಧಿ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗ, ಪಾರಂಪರಿಕ ಸೇವಾಕರ್ತರು ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
ರಾತ್ರಿ ಅಂಗಣೋತ್ಸವ, ಬಂಗರಕಟ್ಟೆ ಪೂಜೆ, ಮೇ. 18ರಂದು ಪೂರ್ವಾಹ್ನ ಅಂಗಣೋತ್ಸವ ರಾತ್ರಿ “ಮಹಾ ರಥೋತ್ಸವ”, ಕವಾಟ ಬಂಧನ.
ಮೇ. 19ರಂದು ಪೂರ್ವಾಹ್ನ ಕವಾಟೋದ್ಘಾಟನೆ, ಮಹಾಪೂಜೆ ಸಂಜೆ ತೆಪ್ಪೋತ್ಸವ, ಕಟ್ಟೆಪೂಜೆ, ವಸಂತ ಕಟ್ಟೆಯಲ್ಲಿ ಓಕುಳಿ, ಮೀನಗುಂಡಿಯಲ್ಲಿ ಅವಭ್ರತೋತ್ಸವ, ಧ್ವಜ ಅವರೋಹಣ, ಪೂರ್ವಾಹ್ನ ಶ್ರೀ ಶಿಶಿಲೇಶ್ವರ ದೇವರ ಮೂಲಸ್ಥಾನ ಕುಮಾರಗುಡ್ಡೆಯಲ್ಲಿ ರುದ್ರಾಭಿಷೇಕ, ಮಹಾಪೂಜೆ, ಕುಮಾರಾದಿ ದೈವಗಳಿಗೆ ನೇಮ, ರಾತ್ರಿ ಗೋಪುರದ ಬಾಗಿಲಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳಿಗೆ ನೇಮ. ವರ್ಷಾವಧಿ ಕಟ್ಟೆಯ ಬಳಿ ದೈವಗಳ ನೇಮ, ಮೇ. 21ರಂದು ಪೂರ್ವಾಹ್ನ ಶುದ್ಧ ಕಲಶ ಸಂಪ್ರೋಕ್ಷಣೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.