ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಮೇ. 16ರಂದು ವಿಶೇಷ ಪೂಜೆಗಳನ್ನು ನಡೆಸಲಾಯಿತು. ಹಿರಿಯ ಸಂಶೋಧಕ, ಡಾ. ಹಾಮಾನಾ ಸಂಶೋಧನಾ ಕೇಂದ್ರ ಉಜಿರೆಯ ನಿರ್ದೇಶಕ ಡಾ. ಎಸ್.ಡಿ. ಶೆಟ್ಟಿ ಹಾಗೂ ಸುಗುಣ ಶೆಟ್ಟಿ ದಂಪತಿಗೆ ಅವರ ಸಾಧನೆ ಮತ್ತು ಮದುವೆಯ 50ನೇ ವರ್ಷದ ಪ್ರಯುಕ್ತ ಶ್ರೀ ಕ್ಷೇತ್ರ ಚಂದ್ರಪುರ ಆಡಳಿತ ಮಂಡಳಿಯ ಪರವಾಗಿ ಸಮಿತಿ ಸಂಚಾಲಕ ಡಾ. ಜಯಕೀರ್ತಿ ಜೈನ್ ನೇತೃತ್ವದಲ್ಲಿ ಗೌರವಿಸಲಾಯಿತು.
ಉಪಾಧ್ಯಕ್ಷ ಜಿನರಾಜ ಪೂವಣಿ, ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ ಕೊಕ್ಕಡ ಶಾಖೆಯ ಪ್ರಬಂಧಕ ಪಿ. ಅತೀಶಯ ಜೈನ್, ರಾಣಿ ಕಾಳಲಾ ದೇವಿ ಜೈನ್ ಮಹಿಳಾ ಸಮಾಜದ ರಕ್ಷಾ, ಪುರೋಹಿತ ಅರಹಂತ ಇಂದ್ರ, ಜಿನೇಶ್ ಜೈನ್ ಮುಂತಾದವರು ಉಪಸ್ಥಿತರಿದ್ದರು.