ಉಜಿರೆ: ಶಾರದಾ ಸೇವಾ ಟ್ರಸ್ಟ್ ಉಜಿರೆ, ಗ್ರಾಮ ಪಂಚಾಯತ್ ಉಜಿರೆ ಹಾಗೂ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಓಡಲ ಉಜಿರೆ ಇದರ ಸಹಯೋಗದಲ್ಲಿ 5ರಿಂದ 9ನೇ ತರಗತಿ ಮಕ್ಕಳಿಗೆ ಮೇ. 15ರಿಂದ 17ರವರೆಗೆ ನಡೆಯಲಿರುವ ಕಾಮಧೇನು ಬೇಸಿಗೆ ಶಿಬಿರ-2025 ಇದರ ಉದ್ಘಾಟನೆಯನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಶಾರದಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಭರತ್ ಕುಮಾರ್, ವ್ಯಾಘ್ರ ಚಾಮುಂಡಿ ದೈವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೆಂಬರ್ಜೆ, ಸದಸ್ಯ ಶ್ರೀನಿವಾಸ ಗೌಡ ಮಧುರ, ಕಾರ್ಯದರ್ಶಿ ಪರಮೇಶ್ವರ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.ಸುಮಾರು 140 ವಿದ್ಯಾರ್ಥಿಗಳು, ಊರಿನ ಗಣ್ಯರು ಹಾಗೂ ಮಾತೆಯರು ಉಪಸ್ಥಿತರಿದ್ದರು.
ಓಡಲ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ
