Site icon Suddi Belthangady

ಬಂದಾರು ಆರತಕ್ಷತೆ ಭೋಜನದ ಬೆನ್ನಲ್ಲೇ ಅಧಿಕ ಮಂದಿ ಅಸ್ವಸ್ಥ: ಓರ್ವ ಮಹಿಳೆ ಸಾವು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಮೇ.12 ರಂದು ನಡೆದ ಅರತಕ್ಷತೆ ಊಟದ ಬಳಿಕ ಹಲವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೇ.16ರಂದು ಮೃತಪಟ್ಟಿದ್ದಾರೆ.

ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ 5 ಮಂದಿ ದಾಖಲಾಗಿರುವುದಾಗಿ ತಿಳಿದು ಬಂದಿದ್ದು ಇವರ ಪೈಕಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ.

ಬಂದಾರು ಗ್ರಾಮದಲ್ಲಿ ಸಾರ್ವತ್ರಿಕವಾಗಿ ವಾಂತಿ ಬೇದಿ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಬಂದಾರಿನ ಸುಮಾರು 40 ಹೆಚ್ಚು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸದ್ದಾರೆ.

ಅರತಕ್ಷತೆಯ ಭೋಜನ ಸೇವಿಸಿದ ಮಂದಿ ಅಸ್ವಸ್ಥರಾಗುತ್ತಿರುವುದಾಗಿ ತಿಳಿದು ಬಂದಿದೆ. ಘಟನೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

Exit mobile version