ಕಕ್ಕಿಂಜೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶಾಖೆ ಸ್ಥಳಾಂತರಗೊಂಡು ಕಕ್ಕಿಂಜೆಯಲ್ಲಿ ಉದ್ಘಾಟನೆಯು ಮೇ. 16ರಂದು ಚಾರ್ಮಾಡಿ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ನಡೆಯಿತು.
ಶಾಖಾ ಕಛೇರಿ ಉದ್ಘಾಟನೆಯನ್ನು ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷ ಎಸ್. ಜಯರಾಮ ಶೆಟ್ಟಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಕೊರ್ಯಾರು ವಹಿಸಿದರು.
ದೀಪ ಪ್ರಜ್ವಲನೆಯನ್ನು ಪ್ರಗತಿಪರ ಕೃಷಿಕ ಕೆ. ಅನಂತರಾಮ್ ರಾವ್ ನೆರವೇರಿಸಿ, ಶುಭಹಾರೈಸಿದರು. ಭದ್ರತಾ ಕೊಠಡಿಯನ್ನು ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ ಉದ್ಘಾಟಿಸಿದರು.
ಮುಖ್ಯ ಅಥಿತಿಗಳಾಗಿ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಬಿ. ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶಾರದ ಎ., ತೋಟತ್ತಾಡಿ ಸೈಂಟ್ ಅಂಥೋನಿ ಪೊರೇನ್ ಚರ್ಚ್ ನ ಟ್ರಸ್ಟಿ ಶಾಜಿ ತೊಪ್ಪಿಲ್, ಕಕ್ಕಿಂಜೆ ಮೊಹಿದ್ದಿನ್ ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಜಿ., ಚಾರ್ಮಾಡಿ ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪ್ರಕಾಶ ಹೊಸಮಠ, ಮುಂಡಾಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ. ವಿನಯಚಂದ್ರ, ಚಾರ್ಮಾಡಿ ಪಂ. ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ. ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪಾಧ್ಯಕ್ಷ ಜಯಂತ್ ಶೆಟ್ಟಿ ಕೆ., ಸುಜಯ್ ಶೆಟ್ಟಿ, ನಿರ್ದೇಶಕರುಗಳಾದ ಎಸ್. ಜಯರಾಮ್ ಶೆಟ್ಟಿ, ಎಂ., ಸೀತಾರಾಮ ಶೆಟ್ಟಿ ಬಿ., ಪುಷ್ಪರಾಜ್ ಶೆಟ್ಟಿ, ರಘುರಾಮ ಶೆಟ್ಟಿ ಎ., ಕೃಷ್ಣ ರೈ ಟಿ., ಎಂ. ಜಯರಾಮ ಭಂಡಾರಿ, ಪುರಂದರ ಶೆಟ್ಟಿ, ಮಂಜುನಾಥ್ ರೈ, ರಾಜು ಶೆಟ್ಟಿ, ಬೆಂಗತ್ಯಾರು, ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಪ್ರಕಾಶ್ ಶೆಟ್ಟಿ ನೊಚ್ಚ, ವಿಜಯ ಬಿ ಶೆಟ್ಟಿ, ಶಾಖಾ ಪ್ರಬಂಧಕ ಅಜಿತ್ ಕುಮಾರ್ ಮತ್ತು ಸಿಬ್ಬಂದಿ ವರ್ಗ, ಸದಸ್ಯರು ಉಪಸ್ಥಿತರಿದ್ದರು. ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿದರು.