Site icon Suddi Belthangady

ಧರ್ಮಸ್ಥಳ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಅನಧಿಕೃತ ಗೂಡಂಗಡಿಗಳನ್ನು ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ತೆರವು

ಧರ್ಮಸ್ಥಳ: ಧರ್ಮಸ್ಥಳದಿಂದ ಬೆಂಗಳೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಲ್ಲೇರಿಯಿಂದ ಕುದ್ರಾಯ ಸೇತುವೆ ತನಕ ರಸ್ತೆ ಬದಿ ಹಾಗೂ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಹಾಕಿರುವ 19 ಅಂಗಡಿಗಳನ್ನು ಧರ್ಮಸ್ಥಳ ಗ್ರಾಮ ಪಂಚಾಯಿತಿಯಿಂದ ತೆರೆವುಗೊಳಿಸಲಾಯಿತು. ಸದ್ರಿ ಅಂಗಡಿಗಳನ್ನು ತೆರವುಗೊಳಿಸುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು. ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಸದ್ರಿ ಅಂಗಡಿಗಳಿಂದಾಗಿ ಈ ಮೊದಲು ವಾಹನಗಳು ಅಪಘಾತವಾಗಿ ಸಾವು ಸಂಭವಿಸಿದ್ದವು.

ಈ ಬಗ್ಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿ ಜಾಗೃತರಾಗಿ ಸಂಬಂಧಪಟ್ಟ ಅಂಗಡಿ ಮಳಿಗೆಗೆ ಧ್ವನಿ ವರ್ಧಕಗಳ ಮೂಲಕ ಸತತವಾಗಿ ತೆರವುಗೊಳಿಸುವಂತೆ ಸೂಚನೆಯನ್ನು ನೀಡಲಾಗಿತ್ತು. ಆದದರೂ ಕೂಡ ತೆರೆವುಗೊಳಿಸದೆ ಇರುವುದರಿಂದ. ಧರ್ಮಸ್ಥಳ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಸಹಕಾರದೊಂದಿಗೆ, ಧರ್ಮಸ್ಥಳ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ. ಹಾಗೂ ಸಿಬ್ಬಂದಿ ವರ್ಗದವರು ತೆರವುಗೊಳಿಸಿದರು. ಧರ್ಮಸ್ಥಳ ಪೊಲೀಸರು ಸಹಕರಿಸಿದರು.

Exit mobile version