Site icon Suddi Belthangady

ಸೌತಡ್ಕ: ಹೊಸ ವ್ಯವಸ್ಥಾಪನಾ ಸಮಿತಿ ಅಧಿಕಾರ ಸ್ವೀಕಾರ: 3ನೇ ಬಾರಿಗೆ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ

ಬೆಳ್ತಂಗಡಿ: ತಾಲೂಕಿನ ಸುಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು, ಸುಬ್ರಹ್ಮಣ್ಯ ಶಬರಾಯ ಅವರು ಮೂರನೇ ಬಾರಿಗೆ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸೌತಡ್ಕ ದೇವಸ್ಥಾನದಲ್ಲಿ ಅವರು ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆವಿ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಅಧಿಕಾರ ಸ್ವೀಕಾರ ಮಾಡಿದರು. ಸಮಿತಿಯ ಇತರೆ ಸದಸ್ಯರು ಈ ವೇಳೆ ಹಾಜರಿದ್ದರು. ರಾಜ್ಯ ಸರ್ಕಾರ ಫೆ. 18 ಮತ್ತು ಮಾ. 3ರಂದು ರಚನೆ ಮಾಡಿದ್ದ ಎರಡೂ ಸಮಿತಿಗಳನ್ನು ಹೈಕೋರ್ಟ್ ರದ್ದುಪಡಿಸಿ, ಹೊಸ ಸಮಿತಿ ಮಾಡುವಂತೆ ಆದೇಶ ನೀಡಿತ್ತು.

ಫೆ. 18ರ ಸರ್ಕಾರಿ ಆದೇಶದಲ್ಲಿ ವಕೀಲ ಉದಯ ಶಂಕರ ಅರಿಯಡ್ಕ ಮತ್ತು ಪ್ರಶಾಂತ್ ರೈ ಗೊಳಿತೊಟ್ಟು ಅವರಿಗೆ ಸ್ಥಾನ ಸಿಕ್ಕಿತ್ತು. ಆದರೆ ಮಾ. 3ರ ಪರಿಷ್ಕೃತ ಆದೇಶದಲ್ಲಿ ಈ ಇಬ್ಬರನ್ನು ಕೈಬಿಟ್ಟು ಪ್ರಮೋದ್ ಶೆಟ್ಟಿ ಮತ್ತು ಪ್ರಶಾಂತ್ ಪೂಜಾರಿ ಅವರನ್ನು ಸೇರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಉದಯ ಶಂಕರ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿ, ಎರಡೂ ಸಮಿತಿಗಳನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಮಾ. 3ರ ಆದೇಶದ ಅನ್ವಯ ಇದ್ದ ಸಮಿತಿಯನ್ನೇ ಈ ಬಾರಿ ರಚನೆ ಮಾಡಿರುವುದು ಗಮನಾರ್ಹ.

ಸುಬ್ರಹ್ಮಣ್ಯ ಶಬರಾಯ ನೇತೃತ್ವದ ತಂಡದ ಇತರೆ ಸದಸ್ಯರ ಪಟ್ಟಿ ಹೀಗಿದೆ:

  1. ವಿಶ್ವನಾಥ್ ಪೂಜಾರಿ ಕೊಲ್ಲಾಜೆ
  2. ಹರಿಶ್ಚಂದ್ರ ಜಿ
  3. ಸಿನಿ ಗುರುದೇವ್
  4. ಗಣೇಶ್ ಕಾಶಿ
  5. ಪ್ರಶಾಂತ್ ಮಚ್ಚಿನ
  6. ಪ್ರಮೋದ್ ಶೆಟ್ಟಿ
  7. ಲೋಕೇಶ್ವರಿ ವಿನಯಚಂದ್ರ
  8. ಸತ್ಯಪ್ರಿಯ ಕಲ್ಲೂರಾಯ (ಪ್ರಧಾನ ಅರ್ಚಕರು)

Exit mobile version