ಅಳದಂಗಡಿ: ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ ಕ್ಷೇತ್ರದ ವತಿಯಿಂದ 2025-26ನೇ ಸಾಲಿನಲ್ಲಿ ಉಚಿತವಾಗಿ ನೀಡುವ ಪುಸ್ತಕಗಳನ್ನು ಪಡೆಯಲು ನಿವೇದನಾ ಪತ್ರ ಮತ್ತು ಕೂಪನ್ ವಿತರಣೆ ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿದೆ. 1ರಿಂದ 4, 5ರಿಂದ 7, 8ರಿಂದ 9, 10ರಿಂದ ಪದವಿವರೆಗಿನ ವಿಭಾಗದಲ್ಲಿ ಪುಸ್ತಕ ವಿತರಣೆ ನಡೆಯಲಿದೆ.
ತಾಲೂಕಿನ ವಿವಿಧ ಗ್ರಾಮಗಳಿಂದ ವಿದ್ಯಾರ್ಥಿಗಳಿಂದ ಅರ್ಜಿ ಬಂದಿದ್ದು, ಜೂ. 8ರಂದು ನಡೆಯುವ ಕಾರ್ಯಕ್ರಮದಲ್ಲಿ ಪುಸ್ತಕ ವಿತರಣೆ ನಡೆಯಲಿದೆ ಎಂದು ಆಡಳಿತದಾರರಾದ ಶಿವಪ್ರಸಾದ್ ಅಜಿಲ ತಿಳಿಸಿದ್ದಾರೆ. ಕಳೆದ ವರ್ಷ ಆರು ಸಾವಿರ ವಿದ್ಯಾರ್ಥಿಗಳಿಗೆ 10ಲಕ್ಷ ಮೌಲ್ಯದ ಪುಸ್ತಕ ವಿತರಣೆ ನಡೆಯಲಿದೆ. ಅರ್ಜಿ ನೀಡಲು ಮೇ. 30 ಕಡೆಯ ದಿನವಾಗಿದೆ.